ಅಡುಗೆ ಎಣ್ಣೆ ಬೆಲೆ ನಿಯಂತ್ರಿಸಿ ವೆಲ್ಫೇರ್ ಪಾರ್ಟಿ ಆಗ್ರಹ

Prasthutha|

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವು ಅಗತ್ಯ ವಸ್ತು ಗಳ ಬೆಲೆ ಏರಿಕೆ ಇಂದ ಕಂಗಲಾಗಿರುವ ಜನ ಸಮಣೀಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡಿರುವದು ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

- Advertisement -

300 ರೂ. ಕೂಲಿ ಸಿಗುವುದೇ ಕಷ್ಟ ವಾಗಿದೆ ಇಂತಹ‌ ಪರಿಸ್ಥಿತಿಯಲ್ಲಿ ಬಡವರು ರೂ.200 ಕೊಟ್ಟು ಅಡುಗೆ ಎಣ್ಣೆ ಖರೀದಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ರಷ್ಯಾ– ಉಕ್ರೇನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳಲು ಅಡುಗೆ ಎಣ್ಣೆಯನ್ನು ಅನಧಿಕೃತ ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

- Advertisement -

ಇತ್ತೀಚಿನ ದಿನಗಳಲ್ಲಿ ಜನರಿಗೆ ಸರಿಯಾದ ಆದಾಯವಿಲ್ಲ ಮತ್ತು ಬಡವರ ದಿನಗೂಲಿಯೂ ಕಡಿಮೆ ಮೊತ್ತಕ್ಕೆ ಕುಸಿದಿದ್ದು ಕುಟುಂಬ ಪಾಲನೆಗೆ ಪಡಬಾರದ ಕಷ್ಟ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಡುಗೆ ಎಣ್ಣೆ ಬೆಲೆ 200ರೂ ವರೆಗೆ ಏರಿಕೆ ಮಾಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಅಡುಗೆ ಎಣ್ಣೆ ಬೆಲೆ ಇಳಿಕೆ ಮಾಡಿ ಬಡವರ ಮದ್ಯಮ ವರ್ಗದ ಜನರಿಗೆ ಆಸರೆ ಆಗಬೇಕಿದೆ ಎಂದು ಆಗ್ರಹಿಸಿದರು.

Join Whatsapp