ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ

Prasthutha|

ದಿನನಿತ್ಯದ ವ್ಯವಹಾರಗಳಲ್ಲಿ ಹಣ ಪಾವತಿಸುವಾಗ ಕೆಲವೊಮ್ಮೆ ನೋಟುಗಳು ಹರಿಯುತ್ತವೆ. ಹಳೆಯ, ಹರಿದ, ಸ್ವಲ್ಪ ಸುಟ್ಟ ನೋಟುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಹಾಗಾದರೆ ಏನು ಮಾಡಬೇಕು?

- Advertisement -

ಹತ್ತು, ಇಪ್ಪತ್ತು ರೂಪಾಯಿ ಹರಿದರೆ ಪರವಾಗಿಲ್ಲ. ಆದರೆ ನೂರು, ಇನ್ನೂರು, ಐನೂರು ರೂಪಾಯಿ ನೋಟುಗಳು ಹರಿದರೆ ಚಿಂತೆಯಾಗದೆ ಇರದು. ಹರಿದ ನೋಟುಗಳನ್ನು ಅಂಟಿಸಲು ಪ್ರಯತ್ನಿಸುತ್ತೇವೆ. ಆದರೆ ಹತ್ತಿರದ ಯಾವುದೇ ಬ್ಯಾಂಕ್‌ನಲ್ಲಿ ಹಳೆಯ ನೋಟುಗಳನ್ನು ಕೊಟ್ಟು ಹೊಸ ನೋಟುಗಳನ್ನು ಪಡೆಯಬಹುದು. ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಲ್ಲೂ ಹಣವನ್ನು ಬದಲಾಯಿಸಬಹುದು.

ಹಳೆಯದಾದ, ಹರಿದ, ಬಣ್ಣ ಮಾಸಿದ ನೋಟುಗಳನ್ನು ಬದಲಾಯಿಸಬಹುದು. ಆದರೆ ನೋಟಿನಲ್ಲಿರುವ ಸಂಖ್ಯೆಗಳು ಸ್ಪಷ್ಟವಾಗಿರಬೇಕು. ಹರಿದಿದ್ದರೂ, ಮುಖ ನೋಟು ಇರಬೇಕು. ಎರಡಕ್ಕಿಂತ ಹೆಚ್ಚು ತುಂಡಾಗಿದ್ದರೂ, ಎಲ್ಲಾ ತುಂಡುಗಳು ಇದ್ದರೆ ಬದಲಾಯಿಸಬಹುದು. ಸ್ವಲ್ಪ ಸುಟ್ಟ ನೋಟುಗಳನ್ನೂ ಬದಲಾಯಿಸಬಹುದು. ಆದರೆ ತುಂಬಾ ಸುಟ್ಟು ಹೋಗಿದ್ದರೆ ಬದಲಾಯಿಸಲು ಸಾಧ್ಯವಿಲ್ಲ.

- Advertisement -

ಪೀಸ್‌ ಪೀಸ್‌ ಆದ ನೋಟುಗಳನ್ನು ಬ್ಯಾಂಕ್‌ಗಳು ಸ್ವೀಕರಿಸುವುದಿಲ್ಲ. ಸಂಖ್ಯೆಗಳು ಅಳಿಸಿಹೋಗಿದ್ದರೆ, ಬಣ್ಣ ಮಾಸಿ ಹೋಗಿದ್ದರೆ ನೋಟುಗಳನ್ನು ತಿರಸ್ಕರಿಸಲಾಗುತ್ತದೆ. ನೋಟುಗಳ ಮೇಲೆ ಏನನ್ನೂ ಬರೆಯಬಾರದು.

ಹಾನಿಗೊಳಗಾದ ನೋಟುಗಳನ್ನು ಬದಲಾಯಿಸುವುದು ಹೇಗೆ?
ಯಾವುದೇ ಬ್ಯಾಂಕ್‌ನಲ್ಲಿ ಹಾನಿಗೊಳಗಾದ ನೋಟುಗಳನ್ನು ಬದಲಾಯಿಸಬಹುದು. ಯಾವುದೇ ಫಾರ್ಮ್ ಭರ್ತಿ ಮಾಡಬೇಕಾಗಿಲ್ಲ, ಯಾವುದೇ ಶುಲ್ಕವಿಲ್ಲ. 5000 ರೂ. ಗಿಂತ ಹೆಚ್ಚಿನ ಮೊತ್ತದ ನೋಟುಗಳನ್ನು ಬದಲಾಯಿಸಲು ಕರೆನ್ಸಿ ಚೆಸ್ಟ್ ಶಾಖೆಗೆ ಹೋಗಬೇಕು. 5000 ರೂ. ಗಿಂತ ಕಡಿಮೆ ಮೊತ್ತದ 5 ನೋಟುಗಳನ್ನು ಯಾವುದೇ ಬ್ಯಾಂಕ್‌ನಲ್ಲಿ ಬದಲಾಯಿಸಬಹುದು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಕರೆನ್ಸಿ ಚೆಸ್ಟ್ ಶಾಖೆಗಳು ಸೇರಿದಂತೆ ಭಾರತದ ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೀವು ಹಾನಿಗೊಳಗಾದ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.



Join Whatsapp