ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು..?

Prasthutha|

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್’ನಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಇತ್ಯಾದಿ ಅಮೂಲ್ಯ ಲೋಹಗಳ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಿದ್ದಾರೆ.

- Advertisement -


ಇದರಿಂದಾಗಿ ಇವುಗಳ ಆಮದು ವೆಚ್ಚ ಕಡಿಮೆ ಆಗುತ್ತದೆ. ಅದರ ಪರಿಣಾಮದಿಂದ ಆಭರಣಗಳ ಬೆಲೆಯೂ ಇಳಿಕೆ ಆಗುತ್ತದೆ. ಈಗಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆ ಆಗತೊಡಗಿದೆ. ಚಿನ್ನ ಮತ್ತು ಬೆಳ್ಳಿ ಮೇಲೆ ಮೂಲ ಆಮದು ಸುಂಕವನ್ನು ಶೇ. 6ಕ್ಕೆ ಇಳಿಸಲಾಗಿದೆ. ಈ ಮುಂಚೆ ಈ ಮೂಲ ಆಮದು ಸುಂಕ ಶೇ. 10 ಇತ್ತು. ಮತ್ತು ಎಐಡಿಸಿ (ಅಗ್ರಿಕಲ್ಚರ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಸೆಸ್) ಶುಲ್ಕ ಶೇ. 5 ಇತ್ತು. ಬಜೆಟ್ ನಲ್ಲಿ 4 ಪ್ರತಿಶತ ಅಂಕಗಳಷ್ಟು ಮೂಲ ಆಮದು ಸುಂಕದಲ್ಲಿ ಇಳಿಕೆ ಮಾಡಲಾಗಿದೆ. ಆದರೆ, ಎಐಡಿಸಿ ಶುಲ್ಕ ಮುಂದುವರಿದಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿ ಮೇಲೆ ಆಮದು ಸುಂಕ ಶೇ. 15 ಇದ್ದದ್ದು ಶೇ. 11ಕ್ಕೆ ಇಳಿದಂತಾಗುತ್ತದೆ.


24 ಕ್ಯಾರಟ್ ನ ಚಿನ್ನದ ಬೆಲೆ ಸೋಮವಾರ ಗ್ರಾಮ್ ಗೆ 7,146 ರೂ ಇತ್ತು. ನಿನ್ನೆ ಮಂಗಳವಾರ ಅದರ ಬೆಲೆ 6,793 ರೂಗೆ ಇಳಿದಿದೆ. ಮೂಲಗಳ ಪ್ರಕಾರ ಚಿನ್ನದ ಬೆಲೆ ಗ್ರಾಮ್ ಗೆ 590 ರೂವರೆಗೂ ಇಳಿಕೆ ಆಗಬಹುದು. ಹತ್ತಿರ ಹತ್ತಿರ 6,000 ರೂವರೆಗೂ ಕುಸಿಯಬಹುದು ಎನ್ನಲಾಗುತ್ತಿದೆ.

- Advertisement -


ಇನ್ನು, ಬೆಳ್ಳಿ ಬೆಲೆ ಗ್ರಾಮ್ ಗೆ 7.6 ರೂವರೆಗೂ ಕಡಿಮೆ ಆಗಬಹುದು ಎಂದೂ ಹೇಳಲಾಗುತ್ತಿದೆ. ಇದರ ಬೆಲೆ ಗ್ರಾಮ್ ಗೆ 90.50 ರೂ ಇತ್ತು. ಬೆಲೆ 87.50 ರೂಗೆ ಇಳಿದಿದೆ. ಈ ಬೆಳ್ಳಿ ಬೆಲೆ ಕೂಡ ಗ್ರಾಮ್ ಗೆ 80 ರೂವರೆಗೂ ಇಳಿಕೆ ಆಗುವ ಸಾಧ್ಯತೆ ಇದೆ.



Join Whatsapp