ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೊರೆತ ಹಣ ಎಷ್ಟು?

Prasthutha|

ನವದೆಹಲಿ: ಭಾರತ ಕ್ರಿಕೆಟ್ ತಂಡ ನಿನ್ನೆ ಐಸಿಸಿ ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿದೆ. ಈ ಮೂಲಕ 17 ವರ್ಷಗಳ ನಂತರ ಭಾರತ ತಂಡಕ್ಕೆ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಸಿಕ್ಕಂತಾದರೆ , 13 ವರ್ಷಗಳ ಬಳಿಕ ವಿಶ್ವ ಕಪ್ ಗೆದ್ದಂತಾಗಿದೆ. ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಕೋಟಿ?

- Advertisement -

ನಿನ್ನೆ ಶತಕೋಟಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಸೆ ಈಡೇರಿದೆ. ಬೃಹತ್ ಹಣವೂ ಭಾರತ ತಂಡಕ್ಕೆ ಸಿಕ್ಕಿದೆ. 20 ಕೋಟಿ 40 ಲಕ್ಷ ರೂಪಾಯಿಗು ಹೆಚ್ಚು ಹಣ ಬಹುಮಾನದ ರೂಪದಲ್ಲಿ ಸಿಕ್ಕಿದೆ. ಫೈನಲ್‌ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ಭಾರತ ತಂಡಕ್ಕೆ ಈಗ ಸಿಕ್ಕಿರುವ 20 ಕೋಟಿ 42 ಲಕ್ಷ ರೂಪಾಯಿ ಹಣದಲ್ಲಿ ತಂಡದ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಪಾಲು ಸಿಗಲಿದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಿಗೆ ಹೆಚ್ಚಿನ ಪಾಲು ಹೋಗಲಿದೆ.

- Advertisement -

ಕ್ರೀಡಾ ಲೋಕದಲ್ಲಿ ಅತಿಹೆಚ್ಚು ಹಣ ನೀಡುವ ಆಟಗಳ ಪೈಕಿ ಫುಟ್‌ಬಾಲ್ ಮೊದಲನೇ ಸ್ಥಾನ ಪಡೆದಿದೆ. ಫಾರ್ಮುಲಾ ರೇಸ್, ಟೆನ್ನಿಸ್, ಬೇಸ್‌ಬಾಲ್ ಆಟದಲ್ಲಿ ಕೂಡ ಕ್ರಿಕೆಟ್ ಆಟಕ್ಕಿಂತ ಹೆಚ್ಚಿನ ಹಣ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕೂಡ ದೊಡ್ಡ ದೊಡ್ಡ ಕ್ರೀಡೆಗಳ ಸಾಲಿಗೆ ಬಂದು ನಿಲ್ಲುತ್ತಿದೆ.

Join Whatsapp