ಬೆಂಗಳೂರು: Voter ID ಹಗರಣದಲ್ಲಿ ಬೊಮ್ಮಾಯಿ ಸರ್ಕಾರದ ನೇರ ಪಾತ್ರವಿದೆ. ಸರ್ಕಾರದ ಪಾತ್ರವಿಲ್ಲದೆ ಖಾಸಗಿ ಸಂಸ್ಥೆಯ ಉದ್ಯೋಗಿಗಳು BLO (Booth Level Officer) ಗಳಾಗಿ ಮತದಾರರ ಮಾಹಿತಿ ಪಡೆಯಲು ಹೇಗೆ ಸಾಧ್ಯ? ಬೂತ್ ಲೆವೆಲ್ ಆಫೀಸರ್ ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತ. ಖಾಸಗಿಯವರಿಗೆ ಅವಕಾಶವೇ ಇಲ್ಲ. ಆದರೆ ಚಿಲುಮೆ ಸಂಸ್ಥೆಯ ಉದ್ಯೋಗಿಗಳು ಹೇಗೆ BLO ಆಫಿಸರ್’ಗಳಾದರು? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, BBMP ವ್ಯಾಪ್ತಿಯ ಸುಮಾರು 7 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಅದರಲ್ಲೂ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿದೆ. ಜಾಗೃತಿ ಮೂಡಿಸುವ ನೆಪದಲ್ಲಿ ಅವರೆಲ್ಲಾ ಅನ್ಯಪಕ್ಷದ ಮತದಾರರು ಎಂಬ ಮಾಹಿತಿ ಪಡೆದು ಅವರ ಹೆಸರು ಡಿಲೀಟ್ ಮಾಡಲಾಗಿದೆ. ಇದು ಅಕ್ರಮವಲ್ಲವೆ ಬೊಮ್ಮಾಯಿಯವರೆ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ಹಿಡಿಯಲು ‘ಆಪರೇಷನ್ ಕಮಲ’, ಚುನಾವಣೆ ಗೆಲ್ಲಲು #OperationVoterID. ಇದು BJPಯ ಕೀಳುತಂತ್ರ. ಈ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆಪರೇಷನ್ ಕಮಲದ ಮೂಲಕ. ಈಗ ಆಪರೇಷನ್ Voter ID ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಮಾನ ಮರ್ಯಾದೆ ಬಿಟ್ಟ BJPಯವರು ಅಧಿಕಾರಕ್ಕಾಗಿ ಏನು ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ಈ ಹಗರಣವೇ ಸಾಕ್ಷಿ ಎಂದು ಅವರು ಕುಟುಕಿದರು.