ಸೌದಿ ಅರಾಮ್ಕೊ ಪೆಟ್ರೋಲಿಯಂ ಸ್ಟೋರೇಜ್ ಸೈಟ್ ಗೆ ಹೌತಿ ದಾಳಿ, ಬೆಂಕಿ ಸ್ಫೋಟ

Prasthutha|

ಸೌದಿ ಅರೇಬಿಯಾ: ಯೆಮೆನ್ ನ ಹೌತಿ ಬಂಡುಕೋರರ ಹಾವಳಿ ಸೌದಿ ಅರೇಬಿಯಾದಲ್ಲಿ ಹೆಚ್ಚಾಗಿದ್ದು, ಶುಕ್ರವಾರ ಇಲ್ಲಿನ ಜೆದ್ದಾಹ್ ನಲ್ಲಿರುವ ಸೌದಿಯ ಅತಿದೊಡ್ಡ ತೈಲ ಕಂಪೆನಿ ಆರಾಮ್ಕೋದ ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ಮಾಡಿದೆ.

- Advertisement -

ಹೌತಿ ಬಂಡುಕೋರರ ದಾಳಿಯಿಂದಾಗಿ ತೈಲ ಕಂಪೆನಿಯಲ್ಲಿರುವ ಎರಡು ಟ್ಯಾಂಕ್ ಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಢ ಕಡು ಬಣ್ಣದ ಹೊಗೆ ಸೃಷ್ಟಿಯಾಗಿ ಜನ ಆತಂಕಕ್ಕೊಳಗಾಗಿದ್ದರು. ಸದ್ಯ ಸೌದಿ ಆಡಳಿತವು ಬೆಂಕಿ ನಂದಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Join Whatsapp