ಭಾರೀ ಸ್ಫೋಟಕ್ಕೆ ಮನೆ ಛಿದ್ರ; ದಂಪತಿಗೆ ಗಂಭೀರ ಗಾಯ

Prasthutha|

ಬೆಂಗಳೂರು: ಭಾರೀ ಸ್ಫೋಟದ ತೀವ್ರತೆಗೆ ಇಡೀ ಮನೆ ಸಂಪೂರ್ಣ ಛಿದ್ರಗೊಂಡು, ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದಲ್ಲಿ ನಡೆದಿದೆ.

- Advertisement -

ಕಲ್ಲೂಡಿ ಗ್ರಾಮದ ವಿನಯ್ ಹಾಗೂ ನಂದಿನಿ ಗಂಭೀರ ಗಾಯಗೊಂಡವರು. ಶಾಂತರಾಜು ಅವರ ಬಾಡಿಗೆ ಮನೆಯಲ್ಲಿ ವಿನಯ್ ಹಾಗೂ ನಂದಿನಿ ವಾಸವಾಗಿದ್ದರು.  ಮನೆಯಲ್ಲಿ ಇಂದು‌ ಬೆಳಗ್ಗಿನ ಜಾವ ಸ್ಫೋಟ ಸಂಭವಿಸಿದ್ದು,  ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ಹಾನಿಯಾಗಿವೆ.

ಮನೆಯಲ್ಲಿದ್ದ ವಿನಯ್ ಹಾಗೂ ನಂದಿನಿಗೆ ಸುಟ್ಟ ಗಾಯಗಳಾಗಿವೆ. ವಿನಯ್ ತಲೆ ಮೇಲೆ ಕಲ್ಲು ಬಿದ್ದು ಗಂಭೀರ ಗಾಯವಾಗಿದೆ. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ವಿದ್ಯುತ್ ಕಂಬವೂ ಹಾನಿಗೊಳಗಾಗಿದೆ.

- Advertisement -

ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಫ್‍ಎಸ್‍ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮೇಲ್ನೋಟಕ್ಕೆ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾಗಿ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

Join Whatsapp