ಬೆಂಗಳೂರು: ಹೋಟೆಲ್ ತಿಂಡಿ-ತಿನಿಸು ಮತ್ತಷ್ಟು ದುಬಾರಿಯಾಗಿದ್ದು, ಗ್ರಾಹಕರಿಗೆ ಹೊಸ ದರ ನಾಲಿಗೆ ಸುಡಲಿದೆ.
- Advertisement -
ಹಾಲು, ಮೊಸರು, ತುಪ್ಪ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಟ್ಟಿದೆ. ಸದ್ದಿಲ್ಲದೆ ಹೋಟೆಲ್ ತಿಂಡಿ-ತಿನಿಸು ದರ ಹೆಚ್ಚಾಗಿದೆ. ಶೇ.15 ರಿಂದ 20 ರಷ್ಟು ದರ ಹೆಚ್ಚಳವಾಗಿದ್ದು, ಹೊಸ ದರದ ಫಲಕಗಳನ್ನು ಕೆಲ ಹೋಟೆಲ್ ಗಳಲ್ಲಿ ಅಳವಡಿಕೆ ಮಾಡಲಾಗಿದೆ.