ಮಂಗಳೂರು: ಹೋಟೆಲ್‌ ಗ‌ಳಲ್ಲಿ ಜೇಬು ಸುಡಲಿದೆ ತಿಂಡಿ, ತಿನಿಸು, ಶೇ 10 ರಷ್ಟು ದರ ಹೆಚ್ಚಳ

Prasthutha|

- Advertisement -

ಮಂಗಳೂರು: ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಕಾರಣ ಮಂಗಳೂರು ನಗರದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳು ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಿವೆ.

ಗ್ಯಾಸ್, ಬಾಡಿಗೆ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜಿಲ್ಲೆಯ ಇತರ ಪಟ್ಟಣಗಳ ಹೋಟೆಲ್​​ಗಳೂ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

- Advertisement -

ಕೆಲವು ಹೋಟೆಲ್‌ ಗಳು ಸಾಮಾನ್ಯವಾಗಿ ಸೆಪ್ಟೆಂಬರ್‌ ನಲ್ಲಿ ಮೆನುಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತವೆ. ಆದರೆ ಈ ವರ್ಷ ಮೊದಲೇ ಮಾಡಬೇಕಾಗಿ ಬಂದಿದೆ. ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಲು ಸಂಘವು ನಿರ್ಧರಿಸಿದೆ ಎಂದು ಹೋಟೆಲ್ ಉದ್ಯಮಿ ಮತ್ತು ದಕ್ಷಿಣ ಕನ್ನಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.



Join Whatsapp