ಶೂಟಿಂಗ್ ವೇಳೆ ಕುದುರೆ ಸಾವು: ನಿರ್ದೇಶಕ ಮಣಿರತ್ನಂ ಮೇಲೆ ಎಫ್ಐಆರ್

Prasthutha|

ಹೈದರಾಬಾದ್: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಾರಿತ್ರಿಕ ಚಿತ್ರದ ಶೂಟಿಂಗ್ ವೇಳೆ ಕುದುರೆ ಒಂದು ಸತ್ತಿದ್ದು‌, ಹೈದರಾಬಾದ್‌ ನ ಕುದುರೆ ಮಾಲಿಕ ನೀಡಿರುವ ದೂರಿನ ಮೇಲೆ ಮಣಿರತ್ನಂ ಮೇಲೆ ಎಫ್‌ ಐಆರ್ ದಾಖಲಾಗಿದೆ.

- Advertisement -

ಆಗಸ್ಟ್‌ ನಲ್ಲೇ ಇದು ನಡೆದಿದ್ದರೂ ಈಗ ಪೇಟಾ ಮತ್ತು ಎಡಬ್ಲ್ಯುಬಿಐ- ಎನಿಮಲ್ ವೆಲ್‌ ಫೇರ್ ಬೋರ್ಡ್ ಆಫ್ ಇಂಡಿಯಾ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಮೊಕದ್ದಮೆ ಬಿಗಿಗೊಂಡಿದೆ.

ಬಿಸಿಲಿನಲ್ಲಿ ಒಂದೇ ಸಮನೆ ಕುದುರೆ ಬಳಸಿದ್ದರಿಂದ ದೇಹದ ನೀರು ಒಣಗಿ ಕುದುರೆ ಸತ್ತಿದೆ. ಇದು ಅಕ್ಷಮ್ಯ ಅಪರಾಧ ಎಂಬುದು ಪೇಟಾ ಹೇಳಿದೆ.

- Advertisement -

ಚೋಳ ರಾಜಸತ್ತೆಗೆ ಸಂಬಂಧಿಸಿದ ಪೊನ್ನಿಯಿನ್‌ ಸೆಲ್ವನ್‌ ನಲ್ಲಿ  ಐಶ್ವರ್ಯ ರೈ ಕೂಡ ನಟಿಸಿದ್ದಾರೆ.

Join Whatsapp