ಭೀಕರ ರಸ್ತೆ ಅಪಘಾತ: ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ಮೃತ್ಯು

Prasthutha|

ಹುಬ್ಬಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ನಗರದ ಹೊರವಲಯದಲ್ಲಿ ನಡೆದಿದೆ.

- Advertisement -

ಅಪಘಾತದಲ್ಲಿ ಇಲಾಖೆಯ ಚಾಲಕ ರಫೀಕ್ ನದಾಪ್ (34) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ವಾಣಿಜ್ಯ ತೆರಿಗೆಯ ಇಲಾಖೆಯ ಇಬ್ಬರು ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗದಗ ರಸ್ತೆಯ ರಿಂಗ್ ರೋಡ್ ಬಳಿ ಮೂರು ವಾಹನಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ನಿಂತಿದ್ದ ಇಲಾಖೆಯ ಟಾಟಾ ಸುಮೋ ವಾಹನಕ್ಕೆ ಹಿಂಬಂದಿಯಿಂದ ಲಾರಿ ಬಂದು ಡಿಕ್ಕಿಹೊಡೆದಿದೆ. ಜಾಗೃತಿ ಕಾರ್ಯಕ್ಕಾಗಿ ಅಧಿಕಾರಿಗಳೊಂದಿಗೆ ಅವರು ತೆರಳಿದ್ದರು ಎಂದು ತಿಳಿದು ಬಂದಿದೆ.

Join Whatsapp