ಪಂದ್ಯ ಸೋತರೂ ಗೆಳತಿಗೆ ಪ್ರಪೋಸ್ ಮಾಡಿ ಗೆದ್ದ ಹಾಂಗ್ ಕಾಂಗ್ ಆಟಗಾರ!

Prasthutha|

ದುಬೈ: ಭಾರತದ ವಿರುದ್ಧ ಹಾಂಗ್ ಕಾಂಗ್ ಸೋಲು ಕಂಡರೂ ಅದರ ಆಟಗಾರರೊಬ್ಬರು ತನ್ನ ಗೆಳತಿಗೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಬುಧವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾಕಪ್ 2022 ಪಂದ್ಯ ನಡೆದಿತ್ತು. ಇದರಲ್ಲಿ ಭಾರತವು ಹಾಂಗ್ ಕಾಂಗ್ ಮುಂದೆ 40ರನ್ ಗಳ ಗೆಲುವು ಕಂಡಿತ್ತು. ಈ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ಹಾಂಗ್ ಹಾಂಗ್ ತಂಡದ ಬ್ಯಾಟ್ಸ್ ಮನ್ ಕಿಂಚಿತ್ ಶಾ ತಮ್ಮ ಗೆಳತಿಗೆ ರಿಂಗ್ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದಾರೆ.


ಇದಕ್ಕೆ ನಾಚಿಕೆಯಿಂದ ಅವರ ಗೆಳತಿ ತಲೆ ಅಲ್ಲಾಡಿಸಿ ‘ಖಂಡಿತ! ಎಂದು ಉತ್ತರಿಸಿದ್ದಾರೆ. ಗೆಳತಿಗೆ ಉಂಗುರ ತೊಡಿಸುವ ಮೂಲಕ ಸಾವಿರಾರು ಜನರ ಮಧ್ಯೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.




Join Whatsapp