ನೇರ ಪ್ರಸಾರದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ: ಹಾಸ್ಯ ಕಲಾವಿದನ ಕಪಾಳಕ್ಕೆ ಬಾರಿಸಿದ ಗಾಯಕಿ

Prasthutha|

ಇಸ್ಲಾಮಾಬಾದ್: ಖ್ಯಾತ ಪಾಕ್ ಗಾಯಕಿ ಶಾಜಿಯಾ ಮಂಜೂರ್‌ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಮಾಡಿದ ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಹಾಸ್ಯಕಲಾವಿದ ಶೆರ್ರಿ ನನ್ಹಾಗೆ ಗಾಯಕಿ ಶಾಜಿಯಾ ಮಂಜೂರ್ ಕಪಾಳ ಮೋಕ್ಷ ಮಾಡಿದ್ದು, ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.

- Advertisement -

ಗಾಯಕಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು ಹಾಸ್ಯನಟ ಹನಿಮೂನ್ ಬಗ್ಗೆ ಪ್ರಶ್ನೆಯನ್ನು ಕೇಳಿದ ಬೆನ್ನಲ್ಲೇ ಗಾಯಕಿ ತೀವ್ರ ಆಕ್ರೋಶಗೊಂಡು ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಪ್ರಶ್ನೆ ಕೇಳಿದ ಹಾಸ್ಯಕಲಾವಿದನನ್ನು ಮೂರನೇ ದರ್ಜೆಯ ವ್ಯಕ್ತಿ ಎಂದು ಗಾಯಕಿ ಕರೆದಿದ್ದಾರೆ.ಮಹಿಳೆಯರೊಂದಿಗೆ ಮಾತನಾಡುವ ರೀತಿ ಇದೇನಾ? ಇದೇ ರೀತಿ ಮಹಿಳೆಯರೊಂದಿಗೆ ಮಾತನಾಡುತ್ತೀರಾ ಎಂದು ಗಾಯಕಿ ಪ್ರಶ್ನಿಸಿದ್ದಾರೆ.

- Advertisement -

ಕಾರ್ಯಕ್ರಮ ಹೋಸ್ಟ್ ಮೊಹ್ಸಿನ್ ಅಬ್ಬಾಸ್ ಹೈದರ್ ಮಧ್ಯಪ್ರವೇಶಿಸಿ ಇಂತಹ ಘಟನೆಗಳನ್ನು ತಡೆಯಲು ಸ್ಕ್ರಿಪ್ಟ್‌ಗೆ ಸೀಮಿತವಾಗಿರುವಂತೆ ನನ್ಹಾಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

Join Whatsapp