ಟೋಕಿಯೊ: ಉಕ್ರೇನ್ ನ ಮೇಲೆ ರಷ್ಯಾ ಆಕ್ರಮಣವನ್ನು ವಿರೋಧಿಸಿ ಹೋಂಡಾ, ಆ್ಯಪಲ್ ತನ್ನ ಉತ್ಪನ್ನಗಳನ್ನು ಸ್ಥಗಿತಗೊಳಿಸಿದೆ.
ರಷ್ಯಾದ ಆಕ್ರಮಣವನ್ನು ವಿರೋಧಿಸಿರುವ ಹೋಂಡಾ ಕಂಪನಿಯು ತನ್ನ ಉತ್ಪನ್ನಗಳಾದ ಕಾರು ಮತ್ತು ಬೈಕ್‌ಗಳ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ವರದಿಯಾಗಿದೆ.
ಅಲ್ಲದೆ, ಆ್ಯಪಲ್ ಕಂಪನಿ ಈ ಬಗ್ಗೆ ಹೇಳಿಕೆ ನೀಡಿದ್ದು, “ನಾವು ರಷ್ಯಾದಲ್ಲಿ ಎಲ್ಲಾ ಉತ್ಪನ್ನಗಳ ಮಾರಾಟವನ್ನು ವಿರಾಮಗೊಳಿಸಿದ್ದೇವೆ. ಕಳೆದ ವಾರ ನಾವು ದೇಶದಲ್ಲಿ ನಮ್ಮ ಮಾರಾಟದ ಚಾನಲ್‌ಗೆ ಎಲ್ಲಾ ರಫ್ತುಗಳನ್ನು ನಿಲ್ಲಿಸಿದ್ದೇವೆ” ಎಂದು ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.