ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ: ಮನೆ ಧ್ವಂಸ

Prasthutha|

ಮಡಿಕೇರಿ: ನಿಯಂತ್ರಣ ತಪ್ಪಿ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಕೊಡಗಿನ ಮದೆನಾಡುವಿನಲ್ಲಿ ನಡೆದಿದೆ.

- Advertisement -

ಬೆಳಗ್ಗೆ ಸುಮಾರು 8.45ರ ವೇಳೆ ಘಟನೆ ನಡೆದಿದ್ದು, ಮಾದಪ್ಪ ಎಂಬುವವರ ಮನೆಗೆ ಲಾರಿ ನುಗ್ಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮುಖ್ಯರಸ್ತೆಯಲ್ಲೇ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿದ ಮನೆಗೆ ನುಗ್ಗಿದೆ. ಸದ್ಯ ಲಾರಿ ನುಗ್ಗಿದ ಪರಿಣಾಮ ಮನೆ ಸಂಪೂರ್ಣ ಕುಸಿತ ಕಂಡಿದೆ. ಇನ್ನೂ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.



Join Whatsapp