ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ತನಿಖಾ ತಂಡದಲ್ಲಿದ್ದ ಅಧಿಕಾರಿಯ ವಜಾಗೊಳಿಸಿದ ಗೃಹ ಸಚಿವಾಲಯ

Prasthutha|

ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯಲ್ಲಿ ಸಿಬಿಐ ತಂಡದಲ್ಲಿದ್ದ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ಅವರನ್ನು ಗೃಹ ಸಚಿವಾಲಯ ವಜಾಗೊಳಿಸಿದೆ. ಅವರು ನಿವೃತ್ತರಾಗುವುದಕ್ಕೆ ಒಂದು ತಿಂಗಳು ಇರುವಾಗ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ವರ್ಮಾ ಅವರು ಸೆ. 30ರಂದು ನಿವೃತ್ತಿಯಾಗಲಿದ್ದರು. ಆದರೆ ಗೃಹ ಸಚಿವಾಲಯವು ಅವರನ್ನು ಆ. 30ರಂದು ವಜಾಗೊಳಿಸಿದೆ. ಆದರೆ ಕಾನೂನು ಆಯ್ಕೆಗಳನ್ನು ಬಳಸಲು ಸೆಪ್ಟೆಂಬರ್ 19ರವರೆಗೆ ಅವರಿಗೆ ದೆಹಲಿ ಹೈಕೋರ್ಟ್ ಕಾಲಾವಕಾಶ ನೀಡಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ಮಾ ಅವರು ಹೈಕೋರ್ಟ್‌ನ ಎರಡು ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ನ್ಯಾಯಾಲಯವು ಸೆಪ್ಟೆಂಬರ್ 16ಕ್ಕೆ ವಿಚಾರಣೆಗೆ ಪಟ್ಟಿ ಮಾಡಿದೆ.

- Advertisement -

ಮಾಧ್ಯಮದೊಂದಿಗೆ ಮಾತನಾಡಿ ದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹದಗೆಡಿಸಿದ್ದು, ಮತ್ತಿತರ ಇಲಾಖಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಆಧಾರದ ಮೇಲೆ ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಿ ಗೃಹ ಸಚಿವಾಲಯವು ಆ. 30ರಂದು ಆದೇಶ ಹೊರಡಿಸಿತ್ತು.



Join Whatsapp