ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರ ಪದಕ

Prasthutha|

ಬೆಂಗಳೂರು: ತನಿಖೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ಆರು ಮಂದಿ ಪೊಲೀಸ್, ಅಧಿಕಾರಿಗಳು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ.

- Advertisement -

ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ಗಣೇಶ್ , ಹೆಸ್ಕಾಂ ಎಸ್ ಪಿ ಶಂಕರ್ ಕೆ. ಮರಿಹಾಳ್, ಡಿವೈಎಸ್ಪಿಗಳಾದ ವೆಂಕಟಪ್ಪ ನಾಯಕ್,ಎಂ.ಆರ್.ಗೌತಮ್, ಶಂಕರ ಗೌಡ ಪಾಟೀಲ್, ಇನ್ಸ್ ಪೆಕ್ಟರ್ ಗುರುಬಸವರಾಜ್  ಪದಕ ಪುರಸ್ಕೃತರಾಗಿದ್ದಾರೆ.

ಇದಲ್ಲದೇ ದೇಶದ ವಿವಿಧ ರಾಜ್ಯಗಳ ಒಟ್ಟು 151 ಮಂದಿ ಅಧಿಕಾರಿಗಳಿಗೆ ಗೃಹ ಸಚಿವರ ಪದಕ ಘೋಷಿಸಲಾಗಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅತ್ಯುನ್ನತ ಗುಣಮಟ್ಟ, ಮಾನದಂಡ ಕಾಪಾಡಿಕೊಳ್ಳುವ ಅಧಿಕಾರಿಗಳಿಗೆ ಈ ಪದಕ ಘೋಷಿಸಲಾಗುತ್ತದೆ.

- Advertisement -

ಕೇಂದ್ರ ಸರ್ಕಾರವು 2018ರಿಂದ ಈ ಪದಕಗಳನ್ನು ನೀಡುವ ಪ್ರಕ್ರಿಯೆ ಆರಂಭಿಸಿದೆ.

ಈ ವರ್ಷ ಪದಕ ಪಡೆಯುತ್ತಿರುವವರ ಪೈಕಿ 15 ಮಂದಿ ಸಿಬಿಐ ಅಧಿಕಾರಿಗಳು ಎನ್ನುವುದು ವಿಶೇಷವಾಗಿದೆ. ಮಹಾರಾಷ್ಟ್ರದಿಂದ ತಲಾ 11, ಉತ್ತರ ಪ್ರದೇಶ, ಮಧ್ಯಪ್ರದೇಶದಿಂದ ತಲಾ 10, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಂದ ತಲಾ ಎಂಟು ಮತ್ತು ಉಳಿದವರು. ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸಂಸ್ಥೆಗಳು. ಈ ಪ್ರಶಸ್ತಿ ಪುರಸ್ಕೃತರಲ್ಲಿ 28 ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.



Join Whatsapp