ಗೃಹ ಸಚಿವ ಪರಮೇಶ್ವರ್​ ಮುಖ್ಯಮಂತ್ರಿ ಆಗಲಿ: ಸಚಿವ ರಾಜಣ್ಣ

Prasthutha|

ತುಮಕೂರು: ಡಾ.ಜಿ.ಪರಮೇಶ್ವರ್​ ಮುಖ್ಯಮಂತ್ರಿ ಆಗಲಿ ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆಎನ್ ರಾಜಣ್ಣ, ನನ್ನ ಜೀವಮಾನದಲ್ಲಿ ಏನು ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ನಾನು ಹೇಳಿದ ಯಾವ ವಿಚಾರವೂ ಅಸತ್ಯವಾಗಿಲ್ಲ ಎಂದು ಹೇಳಿದ್ದಾರೆ.

- Advertisement -

ಡಾ.ಪರಮೇಶ್ವರ್ ಸಿಎಂ ಆಗ್ತಾರೆ ಅನ್ನೋ ವಿಚಾರವೂ ಅಸತ್ಯವಾಗಲ್ಲ. ಸಿದ್ದರಾಮಯ್ಯ ಯಾವಾಗ ಬಿಡುತ್ತಾರೋ ಆಗ ಪರಮೇಶ್ವರ್ ಸಿಎಂ ಆಗುತ್ತಾರೆ ಎಂದರು. ಈ ಅವಧಿಯಲ್ಲೇ ಪರಮೇಶ್ವರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು ಸಿಎಂ ಆಗುತ್ತಾರೆ ಎಂದರು. ನಾನು ಸಚಿವನಾಗಿರೋದೆ ಸಾಕು, ನನಗೆ ಡಿಸಿಎಂ ಹುದ್ದೆ ಬೇಡ ಎಂದು ತಿಳಿಸಿದ್ದಾರೆ.



Join Whatsapp