ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ, ಅಕ್ರಮವಾಗಿ ಮೊಬೈಲ್ ಗಳನ್ನು ಉಪಯೋಗಿಸುವುದನ್ನು ಪ್ರತಿಬಂಧಿಸಲು ಅನುಕೂಲವಾಗುವಂತೆ ಅತ್ಯಾಧುನಿಕ ಮೊಬೈಲ್ ಜಾಮರ್ ಗಳ ಅಳವಡಿಕೆ ಸಂಬಂಧ ರಾಷ್ಟ್ರೀಯ ಸಾರ್ವಜನಿಕ ಉದ್ಯಮ ಸಂಸ್ಥೆ, ಬಿ ಇ ಎಲ್ ನ ಹಿರಿಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಅಲೋಕ್ ಮೋಹನ್, ಮಾಲಿನಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ, ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಮೇರು ಸಂಸ್ಥೆಯಾಗಿರುವ ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಪ್ರಸ್ತಾವನೆಯನ್ನು ರಾಜ್ಯ ಗೃಹ ಇಲಾಖೆಗೆ ನೀಡಿದೆ.
ಬಿ ಇ ಎ ಲ್ ವತಿಯಿಂದ, ಗುಲ್ಶನ್ ಮಂಡ್ಲೇ ಮತ್ತು ರಾಧೇ ಶ್ಯಾಮ್ ಕುಮವಾಟ್ ಅವರು, ಸಚಿವರಿಗೆ ಯೋಜನೆಯ ಬಗ್ಗೆ ವಿವರಣೆ ನೀಡಿದರು.
ಬಿಹಾರ, ಜಾರ್ಖಂಡ್ ಹಾಗೂ ಇತರೆ ರಾಜ್ಯ ಗಳಿಗೆ ಕಾರಾಗೃಹಗಳಲ್ಲಿ ಜಾಮರ್ ಅಳವಡಿಕೆಗೆ ಇಂತಹದೇ ಪ್ರಸ್ತಾವನೆ ಗಳನ್ನೂ ಸಲ್ಲಿಸಿದ್ದು 4G ಹಾಗೂ 5G ತರಂಗಾಂತರಗಳನ್ನು ನಿರ್ಬಂಧಗೊಳಿಸುವ, ತಂತ್ರಜ್ಞಾನ ಹಾಗೂ ಮೊಬೈಲ್ ಫೋನ್ ಜಾಮರ್ ಗಳನ್ನು BEL ಸಂಸ್ಥೆ ಅಭಿವೃದ್ಧಿಗೊಳಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.