ಗೃಹ ಸಚಿವ ಆರಗ ಜ್ಞಾನೇಂದ್ರ RSS ಏಜೆಂಟ್: ಅಂಜಲಿ ನಿಂಬಾಳ್ಕರ್

Prasthutha|

ಬೆಳಗಾವಿ:  ಗೃಹ ಸಚಿವ ಆರಗ ಜ್ಞಾನೇಂದ್ರ ಆರ್‌ ಎಸ್‌ ಎಸ್‌ ಏಜೆಂಟರಂತೆ ವರ್ತಿಸುತ್ತಿದ್ದು, ಕೋಮು ಸೌಹಾರ್ದ ಹಾಳು ಮಾಡುವುದಕ್ಕಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಖಾನಾಪುರ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಹೇಳಿದರು.

- Advertisement -

 ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಸಚಿವರಿಂದ ರಾಜೀನಾಮೆ ಪಡೆಯಬೇಕು ‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಗೂ ಶಾಂತಿ ನೆಲೆಸಬೇಕು ಎಂದರೆ ಅಂತಹ ಸಚಿವರು ಬೇಕಿಲ್ಲ’ ಎಂದರು.

‘ಬಿಜೆಪಿಯವರು ಸರ್ಕಾರ ನಡೆಸುತ್ತಿಲ್ಲ. ಕೋಮುಸೌಹಾರ್ದ ಹಾಳು ಮಾಡುವುದೇ ಅವರ ಕಾರ್ಯಸೂಚಿಯಾಗಿದೆ. ಅಭಿವೃದ್ಧಿ ಕೆಲಸ ಮಾಡದಿದ್ದರಿಂದ ಜಾತಿ–ಧರ್ಮದ ಮೇಲೆ ಜಗಳ ತಂದಿಟ್ಟು ಮತ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp