ಗ್ಯಾಸ್ ಟ್ಯಾಂಕರ್ ಗೆ ಹಿಂದಿನಿಂದ ಕಾರು ಡಿಕ್ಕಿ: ಗೃಹ ರಕ್ಷಕ ಸಿಬ್ಬಂದಿಗೆ ಗಂಭೀರ ಗಾಯ

Prasthutha|

ಉಡುಪಿ: ಕಾರೊಂದು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಎಂಬಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

- Advertisement -


ಮುಲ್ಕಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಚ್.ಕೆ.ರಾಕೇಶ್ (27) ಗಂಭೀರ ಗಾಯಗೊಂಡ ಗೃಹರಕ್ಷಕ ದಳದ ಸಿಬ್ಬಂದಿ. ಅವರು ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಇಂದು ಬೆಳಗ್ಗಿನ ಜಾವ ಮುಲ್ಕಿಯಿಂದ ತನ್ನ ಕಾರಿನಲ್ಲಿ ಉಡುಪಿಗೆ ಹೋಗುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ರಾಕೇಶ್ ತೀವ್ರ ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಉಸಿರಾಡುತ್ತಿದ್ದಾರೆ ಆದರೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp