ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ , ಪ್ರತಿಸ್ಪರ್ಧಿ ಲಿಜ್ ಟ್ರಸ್ ಗಿಂತ ಹಿಂದೆ ಬಿದ್ದಿದ್ದಾರೆ ಎಂದು ಸಮೀಕ್ಷೆಗಳು ಪ್ರಕಟಿಸುವುದರ ಮಧ್ಯೆ ಯುಕೆಯಲ್ಲಿ ವಾಸಿಸುತ್ತಿರುವ ಭಾರತೀಯ ವಲಸಿಗರು ರಿಷಿ ಸುನಕ್ ಗೆಲುವಿಗಾಗಿ ಹೋಮ ಹವನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕ ಮೂಲದ ಹಿಂದೂ ಗುಂಪು (ರಿಪಬ್ಲಿಕನ್ ಹಿಂದೂ ಒಕ್ಕೂಟ) ಕನ್ಸರ್ವೇಟಿವ್ ಪಕ್ಷದ ಸುನಕ್ ಗೆ ಬೆಂಬಲ ನೀಡಿದ್ದು, ಯುಕೆಯ ಮುಂದಿನ ಪ್ರಧಾನಿಯಾಗುವ ಹೋರಾಟದಲ್ಲಿ ತನಗೆ ಸಂಪೂರ್ಣ ಬೆಂಬಲ ನೀಡುವಂತೆ ಎಲ್ಲಾ ಸಂಪ್ರದಾಯವಾದಿಗಳು ಮತ್ತು ಹಿಂದೂಗಳೊಂದಿಗೆ ಕೇಳಿಕೊಂಡಿದ್ದಾನೆ ಎಂದು ಬ್ರಿಟನ್ನಲ್ಲಿ ಇರುವ ಭಾರತೀಯ ಸಿ.ಕೆ.ನಾಯ್ಡು ಎಂಬ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ರಿಷಿ ಭಾರತೀಯ ಎನ್ನುವ ಕಾರಣಕ್ಕಾಗಿ ಗೆಲ್ಲಬೇಕಿಲ್ಲ, ಅವರಲ್ಲಿರುವ ಆಡಳಿತ ಸಾಮರ್ಥ್ಯಕ್ಕಾಗಿ ಅವರು ಗೆಲ್ಲಬೇಕು ಎಂದು ಅವರು ತಿಳಿಸಿದರು