ದಿ ವಾಲ್ ಗರಡಿಯಲ್ಲಿ ಹಿಟ್ ಮ್ಯಾನ್ ಹೊಸ ಇನ್ನಿಂಗ್ಸ್ !

Prasthutha|

ಜೈಪುರ: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T-20 ಸರಣಿಯ ಮೊದಲ ಪಂದ್ಯ ಬುಧವಾರ ಜೈಪುರದಲ್ಲಿ ನಡೆಯಲಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ಕೊಹ್ಲಿ ತ್ಯಜಿಸಿದ ನಾಯಕತ್ವದ ಜವಾಬ್ಧಾರಿಯನ್ನು ಹೆಗಲಿಗೇರಿಸಿಕೊಂಡಿರುವ ‘ಹಿಟ್’ಮ್ಯಾನ್’ ರೋಹಿತ್ ಶರ್ಮಾಗೆ ಬುಧವಾರ ಸವಾಯ್ ಮಾನ್’ಸಿಂಗ್ ಕ್ರೀಡಾಂಗಣದಲ್ಲಿ ಮೊದಲ ಅಗ್ನಿ ಪರೀಕ್ಷೆ ಎದುರಾಗಲಿದೆ.

- Advertisement -

ಸುದೀರ್ಘ ವಿದೇಶ ಪ್ರವಾಸದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಮೈದಾನಕ್ಕಿಳಿಯುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್, ಇಂಗ್ಲೆಂಡ್ ಪ್ರವಾಸ, UAEಯಲ್ಲಿ IPL ಎರಡನೇ ಹಂತ ಮತ್ತು ICC T-20 ವಿಶ್ವಕಪ್ ಟೂರ್ನಿಗಳಿಂದಾಗಿ ಟೀಮ್ ಇಂಡಿಯಾ ಕಳೆದ ಜೂನ್’ನಿಂದ ತವರಿನಲ್ಲಿ ಪಂದ್ಯಗಳನ್ನಾಡಿಲ್ಲ.

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಹಾಗೂ UAEಯಲ್ಲಿ ನಡೆದ ICC T-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಮತ್ತೊಂದೆಡೆ ICC T-20 ವಿಶ್ವಕಪ್ ಟೂರ್ನಿಯ ಫೈನಲ್ ಹಂತಕ್ಕೇರಿದರೂ ಆಸ್ಟ್ರೇಲಿಯಾಗೆ ಶರಣಾಗಿ ಚಾಂಪಿಯನ್ ಪಟ್ಟ ಕಳೆದುಕೊಂಡ ಕಿವೀಸ್ ನೋವು-ನಿರಾಸೆಯ ನಡುವೆಯೇ ಟೀಮ್ ಇಂಡಿಯಾ ವಿರುದ್ಧ ಮತ್ತೊಮ್ಮೆ ಸವಾಲಿಗೆ ಸಿದ್ಧವಾಗಿದೆ.

- Advertisement -

ವಿಲಿಯಮ್ಸನ್ ಬದಲು ಸೌಥಿಗೆ ಸಾರಥ್ಯ

ನ್ಯೂಜಿಲೆಂಡ್ ತಂಡದ ಕೂಲ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ T-20 ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ತಂಡದ ಪ್ರಮುಖ ಬೌಲರ್ ಟಿಮ್ ಸೌಥಿ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ವಿಚಾರಕ್ಕೆ ಬರೋದಾದರೆ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮುಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಬಯಸಿದ್ದು, ಅವರ ಬದಲಿಗೆ ಈ ಬಾರಿಯ IPL’ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್ ಹಾಗೂ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಜೈಪುರದ ಸವಾಯ್ ಮಾನ್’ಸಿಂಗ್ ಕ್ರೀಡಾಂಗಣದಲ್ಲಿ 8 ವರ್ಷಗಳ ಬಳಿಕ ಅಂತರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಈ ಮೈದಾನದಲ್ಲಿ ನಡೆದ ಕೊನೇಯ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ರೋಹಿತ್ ಶರ್ಮಾ 141 ಹಾಗೂ ವಿರಾಟ್ ಕೊಹ್ಲಿ ಅಜೇಯ 100 ರನ್’ಗಳಿಸುವ ಮೂಲಕ ಜಯದ ರುವಾರಿಗಳಾಗಿದ್ದರು



Join Whatsapp