CAA, NRC ಜಾರಿಯ ವಿರುದ್ಧ ದೇಶಾದ್ಯಂತ ಐತಿಹಾಸಿಕ ಹೋರಾಟ ಆರಂಭಗೊಂಡಿದೆ: ಅನ್ವರ್ ಸಾದತ್

Prasthutha|

►ಸಂವಿಧಾನ ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ: ರಿಯಾಝ್ ಫರಂಗಿಪೇಟೆ

- Advertisement -


ಮಂಗಳೂರು: CAA, NRC ಜಾರಿಯ ವಿರುದ್ಧ ದೇಶಾದ್ಯಂತ ಐತಿಹಾಸಿಕ ಹೋರಾಟ ಆರಂಭಗೊಂಡಿದೆ ಎಂದು SDPI ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಸ್ಲಿಮರ ಪವಿತ್ರ ಆಚರಣೆಯಲ್ಲಿ ಒಂದಾದ ರಂಝಾನ್ ಇಂದು ದೇಶಾದ್ಯಂತ ಆರಂಭಗೊಂಡು ಎಪ್ರಿಲ್ 10 ರ ತನಕ ಮುಂದುವರಿಯಲಿದೆ.ಅದೇ ರೀತಿ ಈ ದೇಶದ ನಾಗರಿಕರಿಗೆ ಹಾಗೂ ಪ್ರಮುಖವಾಗಿ ಮುಸ್ಲಿಮರಿಗೆ ಕಂಟಕವಾದ NRC CAA ಜಾರಿಯ ವಿರುದ್ಧ ದೇಶಾದ್ಯಂತ ಐತಿಹಾಸಿಕ ಹೋರಾಟ ಆರಂಭಗೊಂಡಿದೆ, ಈ ಕಾಯಿದೆ ಹಿಂಪಡೆಯುವ ತನಕ ಹೋರಾಟ ಮುಂದುವರಿಯಲಿದೆ ಎಂದರು.


ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ: ರಿಯಾಝ್ ಫರಂಗಿಪೇಟೆ
ಮಂಗಳೂರು: ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

- Advertisement -


ಈ ಬಗ್ಗೆ ಟ್ವಿಟ್ ಮಾಡಿರುವ ಅವರು, CAA NRC ಯಥಾವತ್ತಾಗಿ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಭಾರತದ ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ. ನಾವೆಲ್ಲರೂ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದರು.

Join Whatsapp