ಪಿಡಿಎನ್‌ಎ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಹಿಶಾಮ್ ವೀರ ಕಂಬ ಆಯ್ಕೆ

Prasthutha|

ಬೆಂಗಳೂರು: ಪಿಡಿಎನ್‌ಎ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ಬೆಂಗಳೂರು ದಕ್ಷಿಣ ಅಧ್ಯಕ್ಷರಾಗಿ ಮೊಹಮ್ಮದ್ ಹಿಶಾಮ್ ವೀರ ಕಂಬ ಆಯ್ಕೆಯಾಗಿದ್ದಾರೆ.

- Advertisement -

ಈ ಹಿಂದೆ ಹಿಶಾಮ್ ಅವರು ಮಂಗಳೂರಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯ ಕಾರಣದಿಂದ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಿಶಾಮ್ ಅವರ ಕಾರ್ಯದಕ್ಷತೆ ಪರಿಗಣಿಸಿ ಪಿಡಿಎನ್‌ಎ ರಾಷ್ಟ್ರೀಯ ಸಂಸ್ಥಾಪಕ ನದೀಮ್ ಪಾಷ ಅವರು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.


ಹಿಶಾಮ್ ಅವರು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಜಿಲ್ಲಾದಾದ್ಯಂತ ಸಮಾಜ ಸೇವೆ ಮೂಲಕ ಜನಮನ್ನಣೆಗಳಿಸಿದ್ದರು. ಇದೀಗ ಹಿಶಾಮ್ ಅವರಿಗೆ ಭ್ರಷ್ಟಾಚಾರ ನಿಗ್ರಹದಳದ ಸಂಸ್ಥೆಯ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದೆ.



Join Whatsapp