ಪ್ರವಾದಿ ಜನ್ಮದಿನ ಪ್ರಯುಕ್ತ 328 ಕೈದಿಗಳಿಗೆ ಕ್ಷಮಾದಾನ ನೀಡಿದ ಒಮಾನ್ ದೊರೆ

Prasthutha|

ಮಸ್ಕತ್: ಪ್ರವಾದಿ ಜನ್ಮದಿನದ ಪ್ರಯುಕ್ತ ಒಮಾನ್ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು 328 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.

- Advertisement -

ವಿವಿಧ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಸುಪ್ರೀಮ್ ಕಮಾಂಡರ್ ಆಗಿರುವ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಈ ಸಂದರ್ಭದಲ್ಲಿ ತನ್ನ ವಿಶೇಷಾಧಿಕಾರದ ಮೂಲಕ ಕ್ಷಮೆಯನ್ನು ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

107 ವಿದೇಶಿಯರನ್ನೊಳಗೊಂಡಂತೆ ಒಟ್ಟು 328 ಮಂದಿ ಕೈದಿಗಳು ಈ ಕ್ಷಮಾದಾನದ ಮೂಲಕ ಬಿಡುಗಡೆಯಾಗಲಿದ್ದಾರೆ ಎಂದು ಒಮಾನ್ ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

1443 ರ ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಒಮಾನ್ ದೊರೆ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp