ಡಿಕೆಶಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು: ಸಿಪಿ ಯೋಗೇಶ್ವರ್​ ಪ್ರತಿಕ್ರಿಯೆ

Prasthutha|

ರಾಮನಗರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ ಬಳಿಕ ರಾಮನಗರದಲ್ಲಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಪ್ರತಿಕ್ರಿಯಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಬರುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ. ಚನ್ನಪಟ್ಟಣಕ್ಕೆ ಬಂದು ಸ್ಪರ್ಧೆ ಅವರು ಮಾಡಲಿ. ಈ ಹಿಂದೆ ಇದ್ದ ಚನ್ನಪಟ್ಟಣ ತಾಲ್ಲೂಕಿನ ಸಾತನೂರು ಕ್ಷೇತ್ರದಿಂದ ಸ್ವರ್ಧೆ ಮಾಡುತ್ತಿದ್ದರು. ಚನ್ನಪಟ್ಟಣವನ್ನು ಕನಕಪುರಕ್ಕೆ ಹೋಲಿಕೆ‌ ಮಾಡುತ್ತಿದ್ದಾರೆ. ಕನಕಪುರ ಮಾಡಲ್ ಅಂದ್ರೆ ಏನು? ದೌರ್ಜನ್ಯ, ಕೊಲೆ ಸುಲಿಗೆ ನಾ? ಇದು ಕನಕಪುರ ಮಾಡೆಲ್ ನಾ ಎಂದು ತಿವಿದಿದ್ದಾರೆ.

ನಾವು ಆಗಲಿ ಕುಮಾರಸ್ವಾಮಿ ಅವರಾಗಲಿ ಯಾವುದೇ ನಮ್ಮ ವಿರೋಧಿ ಪಕ್ಷಗಳ ಮುಖಂಡರ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು‌ ಮಾಡಿಲ್ಲ.ಆದರೆ ಕನಕಪುರದಲ್ಲಿ ಡಿಕೆ ಬ್ರದರ್ಸ್ ಕೇಸ್ ಮಾಡಿಸಿದ್ದಾರೆ. ಇದು ಕನಕಪುರ ಮಾಡೆಲಾ? ಚನ್ನಪಟ್ಟಣದಲ್ಲಿ ಜನ ಆರ್ಥಿಕವಾಗಿ ಸದೃಢವಾಗಿದ್ದಾರೆ. ನೀರಾವರಿ ಅಭಿವೃದ್ಧಿಯಾಗಿದೆ. ಕನಕಪುರ ಏನಾಗಿದೆ? ಜನಸಾಮಾನ್ಯರ ಬದುಕು ಸಾಮಾನ್ಯವಾಗಿ ಇದ್ಯಾ? ಜನಸಾಮಾನ್ಯರ ಬದುಕು ಅಲ್ಲಿ ಸದೃಢವಾಗಿ‌ ಇಲ್ಲ. ಡಿಕೆ ಶಿವಕುಮಾರ್ ಇಲ್ಲಿಗೆ ಬಂದಾಗ ನನಗೆ ಯಾಕೆ ಭಯ ಅಂದ್ರೆ ಅವರು ನಡೆದುಕೊಂಡ ರೀತಿ. ಅಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ಮಾಡುತ್ತಾರೆ. ತಾಲ್ಲೂಕು ಅಧಿಕಾರಿಗಳ ಸಭೆ ಮಾಡುವಾಗ ಫೋನ್ ಒಳಗಡೆ ಬಿಟ್ಟಿಲ್ಲ. ಮಾಧ್ಯಮದವರನ್ನು ಹೊರಗಡೆ ಇಟ್ಟು ಸಭೆ ಮಾಡುತ್ತಾರೆ. ಯಾಕೆ ಇದು ಖಾಸಗಿ ಕಾರ್ಯಕ್ರಮವಾ? ನಾನು ಕುಮಾರಸ್ವಾಮಿ ಕಾಲದಲ್ಲಿ ಯಾವುದೇ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಮಾಡಿಲ್ಲ. ಡಿಕೆ ಸುರೇಶ್ ಅವರ ಸೋಲಿನಿಂದ ಡಿಕೆಶಿ ಹತಾಶರಾಗಿದ್ದಾರೆ ಎಂದಿದ್ದಾರೆ.



Join Whatsapp