ಸುಳ್ಯದ ನಡುಬೀದಿಯಲ್ಲಿ ತಲವಾರು ಹಿಡಿದು ಓಡಾಡಿದ ಹಿಂಜಾವೇ ಕಾರ್ಯಕರ್ತನ ಬಂಧನ

Prasthutha|

ಸುಳ್ಯ: ಸುಳ್ಯದ ನಡುಬೀದಿಯಲ್ಲಿ ತಲವಾರು ಹಿಡಿದು ಓಡಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಸಂದೀಪ್ ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

- Advertisement -

ಸಂದೀಪ್ ನಿನ್ನೆ  ಜಾಲ್ಸೂರಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಬಳಿ ಹಾಡಹಗಲೇ ಮಾರಕಾಸ್ತ್ರ ಹಿಡಿದು ರಾಜಾರೋಷವಾಗಿ ಓಡಾಡಿದ್ದ. ಈ ವೀಡಿಯೋ ವೈರಲ್ ಆಗಿತ್ತು.  ಇದನ್ನು ಗಮನಿಸಿದ ಸಂದೀಪ್ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ಕೊಲೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕುರಿತ ಬ್ಯಾನರ್ ಅಳವಡಿಸಿಲು ಕನಕಮಜಲು ಪೇಟೆಯಲ್ಲಿ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಈತ ತಲ್ವಾರ್ ಹಿಡಿದು ನಡೆದಾಡುತ್ತಿದ್ದ ಎಂದು ಹೇಳಲಾಗಿದೆ.



Join Whatsapp