ಹಿಂದುತ್ವ ಸಂಘಟನೆ ಭಜರಂಗ ಸೇನೆ ಕಾಂಗ್ರೆಸ್’ನಲ್ಲಿ ವಿಲೀನ

Prasthutha|

ಭೋಪಾಲ್: ಮಧ್ಯ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿಯಿರುವಂತೆಯೇ ಹಿಂದುತ್ವ ಸಂಘಟನೆ ಭಜರಂಗ ಸೇನೆ ಮಂಗಳವಾರ ಕಾಂಗ್ರೆಸ್ ನೊಂದಿಗೆ ವಿಲೀನವಾಗಿದೆ.

- Advertisement -


ಬಿಜೆಪಿ ಜನಾದೇಶ ವಂಚಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಹಾದಿ ತಪ್ಪಿಸಿದೆ ಎಂದು ಆರೋಪಿಸಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ವಿಲೀನ ನಡೆಯಿತು. ನೂರಾರು ಭಜರಂಗ ಸೇನೆ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.


ಭಜರಂಗ ಸೇನೆ ರಾಷ್ಟ್ರೀಯ ಅಧ್ಯಕ್ಷ ರಜನೀಶ್ ಪಟೇರಿಯಾ ಮತ್ತು ಸಂಯೋಜಕ ರಘುನಂದನ್ ಶರ್ಮಾ ಅವರು ವಿಲೀನದ ಘೋಷಣೆ ಮಾಡಿದ್ದಾರೆ. ಕಮಲ್ ನಾಥ್ ಅವರಿಗೆ ಗದೆ ಹಾಗೂ ಸ್ಮರಣಿಕೆ ನೀಡಿದ ಭಜರಂಗ ಸೇನೆ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

Join Whatsapp