ಹಿಂದುತ್ವ ಶಕ್ತಿಗಳು ಮುಗ್ಧರನ್ನು ಕೊಲ್ಲುತ್ತಿವೆ: ರಾಹುಲ್ ಗಾಂಧಿ

Prasthutha|

►ಹಿಂದೂ ಧರ್ಮ – ಹಿಂದುತ್ವ ಇವೆರಡೂ ಬೇರೆ ಬೇರೆ

- Advertisement -

ನವದೆಹಲಿ: ಹಿಂದುತ್ವ ಶಕ್ತಿಗಳು ಮುಗ್ಧರನ್ನು ಕೊಲ್ಲುತ್ತಿವೆ. ಹಿಂದೂ ಧರ್ಮ ಮತ್ತು ಹಿಂದುತ್ವ ಎರಡು ಬೇರೆ ಬೇರೆ ವಿಷಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ‘ಜನ್ ಜಾಗರಣ ಅಭಿಯಾನ’ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು?, ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ಅವು ನಿಸ್ಸಂಶಯವಾಗಿ ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದಾರೆ.


ಕಾಂಗ್ರೆಸ್ ಪಕ್ಷದ ಸಿದ್ಧಾಂತ ಜೀವಂತವಾಗಿದೆ, ಹಾಗೆ ರೋಮಾಂಚಕವಾಗಿದೆ. ಆದರೆ, ಅದನ್ನು ಮರೆ ಮಾಡಲಾಗಿದೆ. ಇಂದು ಆರ್ಎಸ್ ಎಸ್ ಮತ್ತು ಬಿಜೆಪಿ ದ್ವೇಷದ ಸಿದ್ಧಾಂತವು ನಮಗೆ ಇಷ್ಟವಾಗಲಿ ಅಥವಾ ಇಲ್ಲದಿರಲಿ. ಆದರೆ, ಕಾಂಗ್ರೆಸ್ ಪಕ್ಷದ ಪ್ರೀತಿ, ವಾತ್ಸಲ್ಯ ಮತ್ತು ರಾಷ್ಟ್ರೀಯತೆಯ ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಬೇಕು. ಆದರೆ, ಅದು ಮಬ್ಬಾಗಿದೆ ಎಂದು ಅಭಿಪ್ರಾಯಪಟ್ಟರು.

- Advertisement -


ಕೇಂದ್ರ ಸರ್ಕಾರದ ಬಡವರ ವಿರೋಧಿ ನೀತಿಗಳನ್ನು ಎತ್ತಿ ಹಿಡಿಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು ನವೆಂಬರ್ 14ರಿಂದ ನವೆಂಬರ್ 29ರ ನಡುವೆ ಜನ ಜಾಗರಣ ಅಭಿಯಾನ ಎಂಬ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಹೇಳಿದರು.

Join Whatsapp