ಪುತ್ತೂರು: ಕಳೆದ ಕೆಲವು ದಿನಗಳಿಂದ ಪುತ್ತೂರಿನಲ್ಲಿ ಹಿಂದುತ್ವವಾದಿಗಳು ತಲವಾರು ಹಿಡಿದು ಭಯೋತ್ಪಾದನಾ ಕೃತ್ಯಗಳನ್ನು ಬಹಳ ಜೋರಾಗಿಯೇ ನಡೆಸುತ್ತಿದ್ದು, ಈಗಾಗಲೇ ಒಂದು ಜೀವವನ್ನೇ ಬಲಿ ತೆಗೆಯಿತು. ಸಾರ್ವಜನಿಕವಾಗಿಯೇ ಇಲ್ಲಿಯ ಕಾನೂನು ಮತ್ತು ಪೋಲಿಸ್ ಇಲಾಖೆಯ ಮೇಲೆ ಯಾವುದೇ ಭಯವಿಲ್ಲದೆ ಹಾಡುಹಗಲೇ ತಲವಾರು ಪ್ರದರ್ಶಿಸಿ ಶಾಂತಿ, ಸೌಹಾರ್ದತೆಯಿಂದ ಕೂಡಿರುವ ಪುತ್ತೂರಿನ ನೆಮ್ಮದಿ ಕೆಡಿಸಲು ಬಿಜೆಪಿ, ಆರ್ ಎಸ್ ಎಸ್, ಪುತ್ತಿಲ ಪರಿವಾರ ಸಂಘಟನೆಗಳು ಪ್ರಯತ್ನಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ಇಷ್ಟೆಲ್ಲಾ ನಡೆದರು ಪೋಲಿಸ್ ಇಲಾಖೆ ಜಾಣ ಮೌನ ವಹಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ, ರಾಜ್ಯ ಸರ್ಕಾರವು ಕಣ್ಣಿದ್ದು ಕುರುಡಾಗಿದೆ.ಇಂತಹ ಭಯೋತ್ಪಾದನಾ ಕೃತ್ಯಗಳು ಬಹಿರಂಗವಾಗಿ ನಡೆಯುತ್ತಿದ್ದರೂ ಎನ್.ಐ.ಎ ಕೇವಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಲು ಸೀಮಿತವೆಂಬುದನ್ನು ಮತ್ತೆ ದೃಢಪಡಿಸುತ್ತಿದೆ,ಇಂತಹ ಕೃತ್ಯಗಳನ್ನು ನಡೆಸುತ್ತಿರುವ ಹಿಂದುತ್ವ ಸಂಘಟನೆಗಳ ಮುಖಂಡರನ್ನು ,ರೌಡಿಗಳನ್ನು ತಕ್ಷಣ ಬಂಧಿಸಿ ಇದರ ಹಿಂದಿರುವ ಇವರಿಗೆ ತರಬೇತಿ ನೀಡಿರುವ ಹಾಗೂ ಇವರಿಗೆ ತಲ್ವಾರ್ ಸೇರಿದಂತೆ ಮಾರಕಾಯುದ ಶಸ್ತ್ರಾಸ್ತ್ರಗಳು ಪೊರೈಕೆ ಮಾಡಿರುವವರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇಬ್ರಾಹಿಂ ಸಾಗರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.