ಹಿಂದೂಗಳು ಮನೆಯಲ್ಲಿ ತಲ್ವಾರ್ ಇಡಬೇಕು, ಅದು ಅಪರಾಧವಲ್ಲ: ಪ್ರಮೋದ್ ಮುತಾಲಿಕ್

Prasthutha|

ಕಲಬುರಗಿ: ಹಿಂದೂಗಳು ತಮ್ಮ ಮನೆಯಲ್ಲಿ ಎಲ್ಲರಿಗೂ ಕಾಣುವ ರೀತಿಯಲ್ಲೇ ತಲ್ವಾರ್ ಇಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ.

- Advertisement -

ಕಲಬುರಗಿಯ ಯಡ್ರಾಮಿಯಲ್ಲಿ ನಿನ್ನೆ ನಡೆದ ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲು ನಾವೆಲ್ಲರೂ ಆಯುಧಗಳನ್ನು ಪೂಜೆ ಮಾಡುತ್ತಿದ್ದೆವು. ಇದೀಗ ಪುಸ್ತಕ, ಪೆನ್ನು, ವಾಹನಗಳನ್ನು ಪೂಜೆ ಮಾಡುತ್ತಿದ್ದೇವೆ. ಪೊಲೀಸರು, ಪೊಲೀಸ್ ಠಾಣೆಯಲ್ಲಿ ಎಫ್​ ಐಆರ್​ ಗೆ ಪೂಜೆ ಮಾಡಲ್ಲ. ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂದೂಕಿಗೆ ಪೂಜೆ ಮಾಡಲ್ವಾ? ಹೀಗಾಗಿ ಇನ್ನುಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು. ಮನೆಯಲ್ಲಿ ಒಂದು ತಲ್ವಾರ್​ ಇಡುವುದು ಅಪರಾಧವಲ್ಲ ಎಂದರು.

Join Whatsapp