“ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯತೆಯಿಲ್ಲ” – ಬಾಂಗ್ಲಾದ ಹಿಂದೂ ಮುಖಂಡ

Prasthutha|

ಭಾರತದಲ್ಲಿ ಹಲವು ಆಕ್ರೋಶಗಳಿಗೆ, ಆಕ್ಷೇಪಗಳಿಗೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ಇದೀಗ ಬಾಂಗ್ಲಾದೇಶದಲ್ಲಿ ಸುದ್ದಿಯಾಗುತ್ತಿದ್ದು, ನಮಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯತೆಯಿಲ್ಲ ಎಂದು ಅಲ್ಲಿನ ಹಿಂದೂ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.

- Advertisement -

ನೆರೆ ರಾಷ್ಟ್ರಗಳ ಹಿಂದೂಗಳಿಗೆ ಭಾರತದಲ್ಲಿ ವಾಸಿಸಲು ಅವಕಾಶ ಕಲ್ಪಿಸುವ ಸಿಎಎ ಕುರಿತು ಮಾತನಾಡಿದ ಬಾಂಗ್ಲಾದೇಶದ ಹಿಂದೂ ಮುಖಂಡ, ಮಹಾನಗರ ಸರ್ವಜನ ಪೂಜಾ ಸಮಿತಿಯ ಅಧ್ಯಕ್ಷ ಮೋನಿಂದರ್ ಕುಮಾರನಾಥ್ ‘ ಬಾಂಗ್ಲಾದ ಹಿಂದೂಗಳು ಸಿಎಎ ಕುರಿತು ಹೆಚ್ಚಿನ ಆಸಕ್ತಿ ಹೊಂದಿಲ್ಲ .ಇಲ್ಲಿನ ಹಿಂದೂಗಳಿಗೆ ಅವರದ್ದೇ ಆದ ಸಮಸ್ಯೆಗಳಿವೆ. ಸಿಎಎ ಯಿಂದ ಏನೂ ನಿರೀಕ್ಷಿಸಬೇಕಾಗಿಲ್ಲ . ಸಿ ಎ ಎ ಬಾಂಗ್ಲಾದ ಹಿಂದೂಗಳಿಗೆ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಧಾನಿ ಶೇಖ್ ಹಸಿನಾ ನೇತೃತ್ವದ ಸರಕಾರದಲ್ಲಿ ನಾವು ಸುರಕ್ಷಿತರಾಗಿದ್ದೇವೆ. ಪ್ರಧಾನಿಯವರ ಫಲಕಾರಿಯಾದ ಕ್ರಮಗಳಿಂದ ಅಲ್ಪಸಂಖ್ಯಾತರಾದ ಹಿಂದೂಗಳು ಸುಧಾರಿತಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

Join Whatsapp