ಬೆಂಗಳೂರು: ನಾವು ಹಿಂದೂಗಳಲ್ವಾ, ಅವರು ಮಾತ್ರ ಹಿಂದೂಗಳಾ? ಎಲ್ಲಕ್ಕೂ ಮೊದಲು ನಾವು ಭಾರತೀಯರೆನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕೆರಗೋಡು ಹನುಮ ಬಾವುಟ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಬೇರೆ ಸಂಘಟನೆಗಳು ಸಹ ಮುಂದೆ ಬಂದು ಸರ್ಕಾರೀ ಸ್ಥಳಗಳಲ್ಲಿ ನಾವೂ ಬಾವುಟ ಹಾರಿಸ್ತೀವಿ ಅನುಮತಿ ಕೊಡಿ ಅಂತ ಕೇಳಿದರೆ, ಸಂವಿಧಾನ ಉಲ್ಲಂಘನೆಯಾಗುತ್ತಾ ಹೋಗುತ್ತದೆ. ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಮತ್ತು ಮಂಡ್ಯದಲ್ಲಿ ಅವರಿಗೆ ವೋಟ್ ಬೇಸ್ ಇಲ್ಲ, ಅದನ್ನು ಸೃಷ್ಟಿಸಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ದಲಿತ ಸಂಘರ್ಷ ಸಂಘಟನೆ, ಕೆಂಪೇಗೌಡ ಸಂಸ್ಥೆ-ಹೀಗೆ ಸುಮಾರು 25 ವಿವಿಧ ಸಂಘಟನೆಗಳು ದ್ವಜ ಹಾರಿಸಲು ಅನುಮತಿ ಕೇಳಿವೆಯಂತೆ ಎಂದು ಹೇಳಿದ ಶಿವಕುಮಾರ್, ವಿನಾಕಾರಣ ಅಶಾಂತಿ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.