ಮತ್ತೊಂದು ಮಸೀದಿಯ ಮೇಲೆ ಕೆಂಗಣ್ಣು ಬೀರಿದ ಸಂಘಪರಿವಾರ: ಲಕ್ನೋದ ತೀಲೆ ವಾಲಿ ಮಸೀದಿಯ ಸಮೀಕ್ಷೆಗಾಗಿ ಅರ್ಜಿ

Prasthutha|

ಲಕ್ನೋ: ಲಕ್ನೋದ ತೀಲೆ ವಾಲಿ ಮಸೀದಿಯ ಸಮೀಕ್ಷೆಗಾಗಿ ಕೆಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಿಂದೂ ಕಕ್ಷಿದಾರರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.

- Advertisement -

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ -1 ಪ್ರಫುಲ್ ಕಮಲ್ ಅವರು ಅನುಮತಿ ನೀಡಿದರು.

ಪ್ರಕರಣವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಮುಸ್ಲಿಂ ಕಕ್ಷಿದಾರರ ವಾದವನ್ನು ಎಡಿಜೆ ನ್ಯಾಯಾಲಯ ತಳ್ಳಿಹಾಕಿತು.

- Advertisement -

ತೀಲೆ ವಾಲಿ ಮಸೀದಿಯು ಭಗವಾನ್ ರಾಮನ ಕಿರಿಯ ಸಹೋದರ ಲಕ್ಷ್ಮಣ್ ನಿರ್ಮಿಸಿರುವ ‘ಲಕ್ಷ್ಮಣ ತೀಲಾ’ ವಾಗಿದೆ ಎಂಬುದು ಹಿಂದೂ ದಾವೆದಾರರ ವಾದವಾಗಿದೆ.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಕಿರಿಯ ವಿಭಾಗ) ಫೆಬ್ರವರಿ 17 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ವಕೀಲ ಹರಿಶಂಕರ್ ಜೈನ್ ಅವರು 2013ರಲ್ಲಿ ಲಕ್ನೋದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತೀಲೆ ವಾಲಿ ಮಸೀದಿಯ ಸಮೀಕ್ಷೆ ಕೋರಿ ಪ್ರಕರಣವನ್ನು ದಾಖಲಿಸಿದ್ದರು. ಅಂದಿನಿಂದ ಈ ಪ್ರಕರಣ ವಿಚಾರಣೆಗೆ ಬಾಕಿ ಇದೆ.

ಮುಸ್ಲಿಂ ಕಕ್ಷಿದಾರರು ಈ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.  ಆದರೆ ಅವರ ವಾದಕ್ಕೆ ಮನ್ನಣೆ ಸಿಕ್ಕಿಲ್ಲ.

“ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ತೀಲೆ ವಾಲಿ ಮಸೀದಿಯ ಸಮೀಕ್ಷೆಗಾಗಿ ಕೆಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಿಂದೂ ಕಕ್ಷಿದಾರರಿಗೆ ಅನುಮತಿ ನೀಡಿದೆ” ಎಂದು ಹಿಂದೂ ಕಕ್ಷಿದಾರರನ್ನು ಪ್ರತಿನಿಧಿಸಿದ ವಕೀಲ ಮಧು ಸೇನ್ ಮತ್ತು ಇನ್ನೊಬ್ಬ ವಕೀಲ ಶೇಖರ್ ನಿಗಮ್ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯ ಸಮಯದಲ್ಲಿ, ಹಿಂದೂ ಕಕ್ಷಿದಾರರು ಮಸೀದಿ ಆವರಣದ ಸಮೀಕ್ಷೆಗೆ ಅವಕಾಶ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು.



Join Whatsapp