ಹಿಂದೂ ಎಂಬುವುದು ಧರ್ಮವಲ್ಲ. ಇದು ‘ಸಿಂಧೂ’ ನದಿಯ ಹೆಸರು: ಡಾ. ಸಿದ್ಧರಾಮ ಸ್ವಾಮೀಜಿ

Prasthutha|

- Advertisement -

ಬೆಳಗಾವಿ : ‘ಹಿಂದೂ’ ಎಂಬ ಪದವು ‘ಸಿಂಧೂ’ ನದಿಯ ಹೆಸರೇ ಹೊರತು ವಿವಾದಕ್ಕೆ ಸಂಬಂಧಿಸಿದ ವಿಚಾರವಲ್ಲ. ಹಿಂದೂ ಎಂಬುವುದು ಧರ್ಮವಲ್ಲ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ. ಹಿಂದೂ ಅನುಸರಿಸುವವರು ಸತ್ತರೆ ಸುಡಲಾಗುತ್ತದೆ. ಅದೇ ಲಿಂಗಾಯತರನ್ನು ಹೂಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

ವೇದ ಮತ್ತು ಪುರಾಣವನ್ನು ಒಪ್ಪದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಹಿಂದೂಗಳು ದೇವಸ್ಥಾನದಲ್ಲಿ ದೇವರನ್ನು ಪೂಜಿಸುತ್ತಾರೆ. ಆದರೆ ಲಿಂಗಾಯತರು ತಾವು ಧರಿಸಿದ ಲಿಂಗವನ್ನೇ ಪೂಜಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Join Whatsapp