ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಧ್ವಂಸ | ಅದೇ ಜಾಗದಲ್ಲಿ ಸರಕಾರದ ದುಡ್ಡಿನಲ್ಲೇ ದೇವಸ್ಥಾನ ನಿರ್ಮಾಣಕ್ಕೆ ನಿರ್ಧಾರ

Prasthutha|

ಪೇಶಾವರ : ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ಪ್ರಾಂತ್ಯದ ಗ್ರಾಮವೊಂದರಲ್ಲಿ ಹಿಂದೂ ದೇವಾಲಯವೊಂದನ್ನು ಉದ್ರಿಕ್ತ ಗುಂಪೊಂದು ಧ್ವಂಸಗೊಳಿಸಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ, ಆ ದೇವಸ್ಥಾನದ ಜಾಗದಲ್ಲೇ ಸರಕಾರದ ದುಡ್ಡಿನಲ್ಲೇ ದೇವಾಲಯವನ್ನು ಮರು ನಿರ್ಮಿಸಲಾಗುವುದು ಎಂದು ಅಲ್ಲಿನ ಸರಕಾರ ಘೋಷಿಸಿದೆ.

- Advertisement -

ತೆರ್ರಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಕಟ್ಟಡದಲ್ಲಿ ನಡೆಯುತ್ತಿದ್ದ ನವೀಕರಣವನ್ನು ವಿರೋಧಿಸಿ 1,500ಕ್ಕೂ ಅಧಿಕ ಮಂದಿಯಿದ್ದ ಗುಂಪೊಂದು ದೇವಾಲಯವನ್ನು ಧ್ವಂಸಗೊಳಿಸಿತ್ತು.

ದೇವಾಲಯಕ್ಕೆ ಆದ ಹಾನಿಗೆ ನಾವು ವಿಷಾಧಿಸುತ್ತೇವೆ ಎಂದು ಪ್ರಾಂತ್ಯದ ಮಾಹಿತಿ ಸಚಿವ ಕಮ್ರನ್ ಬಂಗಷ್ ಹೇಳಿದ್ದಾರೆ. ಈ ದೇವಸ್ಥಾನ ಹಾಗೂ ಅದರ ಪಕ್ಕದ ಮನೆಯ ಮರು ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನಿರ್ಮಾಣ ಕಾರ್ಯ ಹಿಂದೂ ಸಮುದಾಯದ ಬೆಂಬಲದೊಂದಿಗೆ ಆರಂಭಗೊಳ್ಳಲಿದೆ. ದೇವಸ್ಥಾನಕ್ಕೆ ರಕ್ಷಣೆಯನ್ನೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.



Join Whatsapp