ಹೊಸಪೇಟೆ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ 400ಕ್ಕಿಂತ ಅಧಿಕ ಸ್ಥಾನ ಗಳಿಸುವುದು ಶತಃಸಿದ್ಧ. 2024ರ ನಂತರ ಭಾರತ ಹಿಂದೂ ರಾಷ್ಟ್ರ ಆಗುವುದು ಸಹ ನಿಶ್ಚಿತ ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. 2014ರ ಹಿಂದಿನ ಪ್ರಧಾನಿಗಳು ದರ್ಗಾ, ಚರ್ಚ್ ಗಳಿಗೆ ಹೋಗಿದ್ದರು. ಆದರೆ ಹಣೆಗೆ ವಿಭೂತಿ ಬಳಿದುಕೊಂಡು ದೇವಸ್ಥಾನಕ್ಕೆ ಹೋದವರೆಂದರೆ ನರೇಂದ್ರ ಮೋದಿ ಮಾತ್ರ, ‘ಹಿಂದೂ ರಾಷ್ಟ್ರ ಎಂದಾಗ ಇಲ್ಲಿನ ಮುಸ್ಲಿಮರು ಇದ್ದಾರೆ, ಕ್ರೈಸ್ತರು ಇದ್ದಾರೆ, ಅವರ ಗತಿ ಏನು ಎಂದು ಕೇಳುವವರಿದ್ದಾರೆ. ಅವರು ಇಲ್ಲೇ ಇರುತ್ತಾರೆ, ಬಹುಸಂಖ್ಯಾತರ ಆಚರಣೆ, ಸಂಸ್ಕೃತಿಯನ್ನು ಅವರು ಗೌರವಿಸಿದರೆ ಯಾವುದೇ ತೊಂದರೆ ಇರುವುದಿಲ್ಲ’ ಎಂದರು.