ಸಂವಿಧಾನ ಶಿಲ್ಪಿಗೆ ಕೇಸರಿ ಬಟ್ಟೆ ಹಾಕಿದ ಪ್ರಕರಣ: ಹಿಂದೂ ಸಂಘಟನೆಯ ನಾಯಕನ ಬಂಧನ

Prasthutha|

ಚೆನ್ನೈ: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಕೇಸರೀಕರಣಗೊಳಿಸಿ ಪೋಸ್ಟರ್ ಹಾಕಿದ್ದಕ್ಕಾಗಿ ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ ಕುಂಭಕೋಣಂ ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕುಂಭಕೋಣಂನ ವಿವಿಧ ಸ್ಥಳಗಳಲ್ಲಿ ಅಂಬೇಡ್ಕರ್’ರವರಿಗೆ ಕೇಸರಿ ಬಣ್ಣದ ಬಟ್ಟೆ ಉಡಿಸಿ, ಹಣೆಗೆ ವಿಭೂತಿ-ಕುಂಕುಮ ಹಚ್ಚಿದ ಪೋಸ್ಟರ್ ಗಳನ್ನು ಹಾಕಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿಡುದಲೈ ಕಚ್ಚಿ ಮಕ್ಕಳ್, ದಲಿತ ಸಂಘಟನೆಗಳು ಗುರುಮೂರ್ತಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ, ಘೋಷಣೆಗಳನ್ನು ಕೂಗಿ ಉಪ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ಇಂತಹ ಧಾರ್ಮಿಕ ಹುಚ್ಚರನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಬೇಕು. ಅಂಬೇಡ್ಕರ್’ರವರಿಗೆ ಈ ರೀತಿ ಅವಮಾನ ಮಾಡುವವರನ್ನು ಕೂಡಲೇ ಬಂಧಿಸಬೇಕೆಂದು ವಿಡುದಲೈ ಕಚ್ಚಿ ಮಕ್ಕಳ್ ನಾಯಕ ತೋಲ್ಕಾನಪ್ಪಿಯನ್ ತಿರುಮಾವಳನ್ ಆಗ್ರಹಿಸಿದ್ದಾರೆ.

- Advertisement -

ಈ ಮಧ್ಯೆ ಜಾಗೃತಿ ಮೂಡಿಸಲಿಕ್ಕಾಗಿ ಬಿ.ಆರ್. ಅಂಬೇಡ್ಕರ್’ಗೆ ಕೇಸರಿ ಉಡಿಸಿದ್ದೆಂದು ಹಿಂದೂ ಮಕ್ಕಳ್ ಪಾರ್ಟಿ ನಾಯಕ ಅರ್ಜುನ್ ಸಂಪತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸಂಬಂಧ  ಪೊಲೀಸರು ಗುರುಮೂರ್ತಿ ಎಂಬಾತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.



Join Whatsapp