ಲೈವ್ ಡಿಬೆಟ್ ನಲ್ಲಿ ಹೊಡೆದಾಡಿಕೊಂಡ ಹಿಂದೂ-ಮುಸ್ಲಿಂ ನಾಯಕರು…!

Prasthutha|

ನವದೆಹಲಿ: ಪ್ಯಾನೆಲಿಸ್ಟ್ ಗಳು ಪರಸ್ಪರ ಕಪಾಳಮೋಕ್ಷ ಮಾಡುತ್ತಾ ಲೈವ್ ನಲ್ಲೇ ಹೊಡೆದಾಡಿಕೊಂಡಿರುವ ಘಟನೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದಿದೆ.

- Advertisement -


ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಪಾಕಿಸ್ತಾನದ ಭೇಟಿಯ ಕುರಿತಾದ ಆ್ಯಂಕರ್ ಅನುರಾಗ್ ಮುಸ್ಕಾನ್ ಅವರು ನಡೆಸುತ್ತಿರುವ ‘ತಾಲ್ ತೊಕ್ ಕೆ’ ಝೀ ನ್ಯೂಸ್ ಚರ್ಚಾ ಕಾರ್ಯಕ್ರಮದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.


ಝಾಕಿರ್ ನಾಯ್ಕ್ ಪಾಕಿಸ್ತಾನದ ಭೇಟಿ ಕುರಿತು ಒಬ್ಬ ಹಿಂದೂ ಮುಖಂಡ ಮತ್ತು ಒಬ್ಬ ಮುಸ್ಲಿಂ ಮುಖಂಡ ಪ್ಯಾನಲ್ ಡಿಬೇಟ್ ನಲ್ಲಿ ಭಾಗಿಯಾಗಿದ್ದರು.

- Advertisement -


ಕಾರ್ಯಕ್ರಮದಲ್ಲಿ ಉಭಯ ಮುಖಂಡರ ನಡುವೆ ಮಾತಿನ ಚಕಮಕಿಯಾಗಿದ್ದು, ಚರ್ಚೆಯ ಮಧ್ಯೆದಲ್ಲೇ ಆಚಾರ್ಯ ವಿಕ್ರಮಾದಿತ್ಯ ಮುಸ್ಲಿಂ ಮುಖಂಡ ಹಾಜಿಕ್ ಖಾನ್ ಅವರ ಕತ್ತಿನ ಪಟ್ಟಿಗೆ ಕೈ ಹಾಕಿ ಕೆನ್ನೆಗೆ ಬಾರಿಸಿದ್ದಾರೆ. ಈ ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. The Analyzer (News Updates) ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.



Join Whatsapp