ಮಧ್ಯಪ್ರದೇಶ । ಸ್ಥಳ ಖಾಲಿ ಮಾಡುವಂತೆ ಬೆದರಿಕೆ ಹಾಕಿ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿದ ಸಂಘಪರಿವಾರ

Prasthutha|

ಭೋಪಾಲ್: ಹಿಂದೂಗಳು ವಾಸಿಗಳು ಈ ಸ್ಥಳವನ್ನು ತೊರೆಯುವಂತೆ ಬೆದರಿಕೆ ಹಾಕಿದ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಈ ಘಟನೆಯಿಂದ ಸಂತ್ರಸ್ತರಾದ ಕುಟುಂಬಗಳಿಂದ ಕೆಲವು ಮೀಟರ್ ದೂರುದಲ್ಲಿ ವಾಸಿಸುವ ಬಂಟಿ ಉಪಾಧ್ಯಾಯ ಎಂಬಾತ ತನ್ನ ಸಹಚರರೊಂದಿಗೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮೂರು ಕುಟುಂಬದ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಆಗಮಿಸಿದ ಉಪಾಧ್ಯಾಯ, ಈ ಪ್ರದೇಶದಲ್ಲಿ ಯಾವುದೇ ಮುಸ್ಲಿಮರು ವಾಸಿಸುವುದು ನಮಗೆ ಇಷ್ಟವಿಲ್ಲ ಎಂದು ಗದರಿಸಿದ ಸಂಘಪರಿವಾರದ ತಂಡ, ತಕ್ಷಣ ಮನೆಯನ್ನು ತೊರೆಯುವಂತೆ ಬಲವಂತಪಡಿಸಿದೆ ಎಂದು ಸಂತ್ರಸ್ತ ಶೌಕತ್ ಎಂಬವರ ಪತ್ನಿ ಅಕೀಲಾ ಬಿ. ಆರೋಪಿಸಿದ್ದಾರೆ.

- Advertisement -

ಶೌಕತ್ ನೀಡಿದ ದೂರಿನ ಆಧಾರದಲ್ಲಿ ಊರು ತೊರೆಯಲು ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಉಪಾಧ್ಯಾಯ ಎಂಬಾತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ 15 ದಿನಗಳ ಬಳಿಕ ಬಿಡುಗಡೆಯಾದ ಉಪಾಧ್ಯಾಯ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿಕೊಂಡು ಸುಟ್ಟು ಹಾಕಿದ್ದಾನೆ.

ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಾಧ್ಯಾಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಶೌಕತ್ ಮತ್ತು ಕುಟುಂಬ ಭವಿಷ್ಯದ ದಾಳಿಯಿಂದ ತಪ್ಪಿಸಿಕೊಳ್ಳಲು ಇಂದೋರ್ ಗೆ ಸ್ಥಳಾಂತರಗೊಂಡಿದೆ ಎಂದು ಹೇಳಲಾಗಿದೆ.

Join Whatsapp