ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ ಪ್ರಕರಣ | ಹಿಂದೂ ಮಹಾಸಭಾ ಮುಖಂಡರಿಗೆ ಜಾಮೀನು

Prasthutha|

► ಗಾಂಧಿಯನ್ನೇ ಬಿಟ್ಟಿಲ್ಲ , ನಿಮ್ಮನ್ನು ಬಿಡ್ತೀವಾ ಎಂದಿದ್ದ ಮುಖಂಡರು !

ಮಂಗಳೂರು: ಮೈಸೂರು ದೇವಸ್ಥಾನ ಧ್ವಂಸ ಮಾಡಿದ ಪ್ರಕರಣಕ್ಕೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಒಡ್ಡಿ ಬಂಧನಕ್ಕೊಳಗಾಗಿದ್ದ ಹಿಂದೂ ಮಹಾಸಭಾ ಮುಖಂಡರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -

ಕಳೆದ ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡರು ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ , ಇನ್ನು ನಿಮ್ಮನ್ನು ಬಿಡ್ತೀವಾ ಎಂದು ಮುಖ್ಯಮಂತ್ರಿಗೆ ಬೆದರಿಕೆ ಒಡ್ಡಿದ್ದರು. ಅಲ್ಲದೇ ಈ ಹೇಳಿಕೆ ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿತ್ತು.

ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಮಹಾಸಭಾ ರಾಜ್ಯಧ್ಯಕ್ಷ ರಾಜೇಶ್ ಪವಿತ್ರನ್ ರಾಜ್ಯ ಪ್ರ. ಕಾರ್ಯದರ್ಶಿ ಧರ್ಮೇಂದ್ರ, , ಪ್ರೇಮ್, ಸಂದೀಪ್ ಶೆಟ್ಟಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು. ಇದೀಗ ಮಂಗಳೂರಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಈ ಎಲ್ಲಾ ಮುಖಂಡರಿಗೆ ಜಾಮೀನು ನೀಡಿದೆ.

- Advertisement -