ಯುಗಾದಿ ಹಬ್ಬದಂದು ಹಲಾಲ್ ಮಾಂಸ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

Prasthutha|

ಬೆಂಗಳೂರು: ಯುಗಾದಿ ಹಬ್ಬದಂದು ಹಲಾಲ್ ಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.

- Advertisement -

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿ ವಕ್ತಾರ ಮೋಹನ್ ಗೌಡ ಹಿಂದೂ ಹಬ್ಬಗಳಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಬೇಕು. ಹಲಾಲ್ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೂ ಬಳಸಲಾಗುತ್ತದೆ. ವೈಜ್ಞಾನಿಕವಾಗಿಯೂ ಹಲಾಲ್ ಮಾಂಸವು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ ಎಂದರು.

ಸರ್ಕಾರಿ ಆಹಾರ ಒಪ್ಪಂದಗಳಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸುವಂತೆ ನಾವು ವಿನಂತಿಸಿದ್ದೇವೆ. ಹಲಾಲ್ ಮಾಂಸದ ವಿರುದ್ಧದ ನಮ್ಮ ಅಭಿಯಾನವು ಕಳೆದ ವರ್ಷವೂ ದೊಡ್ಡ ಹಿಟ್ ಆಗಿತ್ತು. ಈ ವರ್ಷವೂ ನಾವು ಅಂಗಡಿಗಳಿಗೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಪ್ರಚಾರ ಮಾಡುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ, ಕಿರುತೆರೆ ನಟ ಹಾಗೂ ಸಮಿತಿ ಸದಸ್ಯ ಪ್ರಶಾಂತ್ ಸಂಬರಗಿ ಹೇಳಿದರು.

- Advertisement -



Join Whatsapp