“ರಷ್ಯಾ ನಿಮ್ಮ ಜೊತೆ ನಾವಿದ್ದೇವೆ”: ಹಿಂದೂ ಸೇನಾ !

Prasthutha|

ದೆಹಲಿ: ರಷ್ಯಾದ ಜೊತೆ ನಾವು ನಿಲ್ಲುತ್ತೇವೆ ಎಂದು ಹಿಂದೂ ಸೇನೆಯ ಸ್ವಯಂಸೇವಕರು ರವಿವಾರ ದೆಹಲಿಯಲ್ಲಿ ರಷ್ಯಾವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುವ ಮೆರವಣಿಗೆ ನಡೆಸಿದರು.

- Advertisement -

‘ರಷ್ಯಾ ತುಮ್ ಸಂಘರ್ಷ್ ಕರೋ, ಹಮ್ ತುಮ್ಹಾರೆ ಸಾಥ್ ಹೇ (ರಷ್ಯಾ, ನೀವು ಹೋರಾಡಿ, ನಿಮ್ಮೊಂದಿಗೆ ನಾವು ಇದ್ದೇವೆ)’, ‘ಭಾರತ್ ಮಾತಾ ಕಿ ಜೈ’, ‘ಭಾರತ್-ರಷ್ಯಾ ದೋಸ್ತಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಹಿಂದೂ ಸೇನೆಯ ಕಾರ್ಯಕರ್ತರು ಕೂಗಿದ್ದಾರೆ.

ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಮಾತನಾಡಿ, ಯಾವುದೇ ಯುದ್ಧವು ಒಳ್ಳೆಯದಲ್ಲ, ಆದರೆ ನಾವು ಒಳ್ಳೆಯದು ಮತ್ತು ಉತ್ತಮವಾದವುಗಳ ನಡುವೆ ಆಯ್ಕೆ ಮಾಡಬೇಕು ಎಂದರೆ ನಾವು ರಷ್ಯಾದ ಬೆಂಬಲಕ್ಕೆ ನಿಲ್ಲುತ್ತೇವೆ, ಏಕೆಂದರೆ ರಷ್ಯಾ ಯಾವಾಗಲೂ ಭಾರತದ ನಿಜವಾದ ಸ್ನೇಹಿತ” ಎಂದು ಅವರು ಹೇಳಿದರು.

Join Whatsapp