ಹಿಂದೂ ಕಾರ್ಯಕರ್ತರೇ ಒಬ್ಬೊಬ್ಬರೇ ಓಡಾಡಬೇಡಿ, ಕಾಂಗ್ರೆಸ್ ಸರ್ಕಾರ ಇರುವವರೆಗೆ ಎಲ್ಲರನ್ನೂ ಕೊಲ್ಲುತ್ತಾರೆ: ಶ್ರೀರಾಮುಲು

Prasthutha|

►‘ವೇಣುಗೋಪಾಲ್ ಹತ್ಯೆಯ ವಿಚಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ ಮಾಡುತ್ತೇವೆ’

- Advertisement -

ಮೈಸೂರು: ಹಿಂದೂ ಕಾರ್ಯಕರ್ತರೇ ಒಬ್ಬೊಬ್ಬರೆ ಓಡಾಡಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೆ ಎಲ್ಲರನ್ನೂ ಕೊಲ್ಲುತ್ತಾರೆ. ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.


ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ವೇಣುಗೋಪಾಲ್ ನಾಯಕ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದನು. ವೇಣುಗೋಪಾಲ್ ಮೊಬೈಲ್ ಪರಿಶೀಲನೆ ಮಾಡಿದರೇ ಗೊತ್ತಾಗುತ್ತೆ ಎಂದರು.

- Advertisement -


ಕೊಲೆಯಾದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರ ನಿವಾಸಕ್ಕೆ ಇಂದು ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿದರು. ಈ ವಿಚಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ. ಎಲ್ಲರಿಗೂ ಶಿಕ್ಷೆಯಾಗಬೇಕು, ನಾವೆಲ್ಲ ಹೋರಾಟ ಮಾಡುತ್ತೇವೆ ಎಂದು ವೇಣುಗೋಪಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.