ರೈತರ ಪ್ರತಿಭಟನೆ | ಸರಕಾರದ ಪರ ಹೇಳಿಕೆ ನೀಡಿದ ಕಂಗನಾ ರಣಾವತ್ ಗೆ ನಟಿ ಹಿಮಾಂಶಿ ಖುರಾನಾ ಛೀಮಾರಿ

Prasthutha|

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಸರಕಾರದ ರೈತ ವಿರೋಧಿ ಕೃಷಿ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಸರಕಾರದ ಪರ ಮಾತನಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಹಿಮಾಂಶಿ ಖುರಾನಾ ಛೀಮಾರಿ ಹಾಕಿದ್ದಾರೆ.

- Advertisement -

“ಪ್ರತಿಭಟನೆಯಲ್ಲಿ ಭಾಗವಹಿಸಲು ಆ ಹಿರಿಯ ಮಹಿಳೆ ಹಣ ಪಡೆದಿದ್ದಾರೆ ಎಂದಾದರೆ, ಸರಕಾರದ ಪರವಾಗಿ ಮಾತನಾಡಲು ನೀವು ಎಷ್ಟು ಹಣ ಪಡೆದಿದ್ದೀರಿ. @ಕಂಗನಾತಂಡ, #ನಾಚಿಕೆರಹಿತಕಂಗನಾ, #ರೈತಕಾರ್ಮಿಕಐಕ್ಯತೆಝಿಂದಾಬಾದ್ #ರೈತಐಕ್ಯತೆಝಿಂದಾಬಾದ್”’ ಎಂದು ಹಿಮಾಂಶಿ ಕುರಾನಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರಂತೆ ಮಾತನಾಡುತ್ತಿರುವ ಕಂಗನಾ, ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿಯೇ ಸುದ್ದಿಯಲ್ಲಿದ್ದಾರೆ.

- Advertisement -

ನಾಚಿಕೆಗೇಡು… ರೈತರ ಹೆಸರಲ್ಲಿ ಯಾರ್ಯಾರೋ ತಮ್ಮ ರೊಟ್ಟಿ ಸಂಪಾದಿಸುತ್ತಿದ್ದಾರೆ. ಸರಕಾರ ಇಂತಹ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ರಕ್ತದಾಹಿ ಹದ್ದುಗಳು ಮತ್ತು ತುಕ್ಡೆ ಗ್ಯಾಂಗ್ ಗಳಿಗೆ ಇನ್ನೊಂದು ಶಹೀನ್ ಬಾಗ್ ಗಲಭೆ ನಡೆಸುವುದಕ್ಕೆ ಸರಕಾರ ಅವಕಾಶ ನೀಡುವುದಿಲ್ಲ ಎಂಬ ಭರವಸೆಯಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು.



Join Whatsapp