ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿಜಾಬಿ ಮಹಿಳೆ: 22 ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗಳನ್ನು ಗೆದ್ದ ‘ಗೋಲ್ಡನ್ ಗರ್ಲ್’

Prasthutha|

ಹೈದರಾಬಾದ್; ಸಈದಾ ಫಲಕ್ ಎಂಬ ಮುಸ್ಲಿಂ ಮಹಿಳೆ ಹಿಜಾಬ್ ಧರಿಸಿಕೊಂಡು ಭಾರತವನ್ನು ಪ್ರತಿನಿಧಿಸುತ್ತಿದ್ದು ಫಲಕ್ ಇದುವರೆಗೆ 20 ರಾಷ್ಟ್ರೀಯ ಮತ್ತು 22 ಅಂತರರಾಷ್ಟ್ರೀಯ ಚಾಂಪಿಯನ್ ಶಿಪ್ ಗಳನ್ನು ಗೆದ್ದಿದ್ದಾರೆ. ಫಲಕ್ ಅವರನ್ನು ಹೈದರಾಬಾದ್ ನ “ಗೋಲ್ಡನ್ ಗರ್ಲ್” ಎಂದೂ ಕರೆಯಲಾಗುತ್ತದೆ.

- Advertisement -

ಫಲಕ್, ಪ್ರಸ್ತುತ ಸುಲ್ತಾನ್ ಉಲ್ ಉಲೂಮ್ ಕಾಲೇಜಿನಲ್ಲಿ ಎಲ್ಎಲ್ಬಿ ಓದುತ್ತಿದ್ದು, ಆಲ್ ಇಂಡಿಯನ್ ಮಜ್ಲಿಸ್-ಇ-ಇತ್ತಿಹಾದ್-ಉಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಸದಸ್ಯರೂ ಆಗಿದ್ದಾರೆ. ಒಬ್ಬ ಕ್ರೀಡಾ ವ್ಯಕ್ತಿಯಾಗಿರುವುದು, ಒಬ್ಬರ ಧಾರ್ಮಿಕ ಗುರುತನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಬಹುದು. ಆದಾಗ್ಯೂ, ಹಿಜಾಬ್ ಧರಿಸುವ ತನ್ನ ಪ್ರಯಾಣವನ್ನು ಹಂಚಿಕೊಂಡ ಫಲಕ್, ನಾನು ಎರಡೂವರೆ ವರ್ಷಗಳ ಹಿಂದೆ ನನ್ನ ಸ್ವಂತ ಇಚ್ಛೆಯಿಂದ ದುಪಟ್ಟಾವನ್ನು ಧರಿಸಲು ಪ್ರಾರಂಭಿಸಿದೆ. ಮೊದಮೊದಲು, ಇದು ಸ್ವಲ್ಪ ವಿಚಿತ್ರವಾಗಿತ್ತು ಆದರೀಗ ನಾನು ಅದಕ್ಕೆ ಒಗ್ಗಿಕೊಂಡಿದ್ದೇನೆ ಎಂದು ಹೇಳಿದರು.

ತನ್ನ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಹಿಜಾಬ್ ಕ್ರೀಡೆಯನ್ನು ಆಡುವ ಬಗ್ಗೆ ನಿಮಗೆ ಭಯವಿದೆಯೇ ಎಂದು ಕೇಳಿದಾಗ, ಹಿಜಾಬ್ ನನ್ನ ವೃತ್ತಿಜೀವನದಲ್ಲಿ ಅಡ್ಡಿಯಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.



Join Whatsapp