ಹಿಜಾಬ್ ನಮ್ಮ ಹಕ್ಕು: ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್

Prasthutha|

‘ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ’

- Advertisement -

ಮಂಡ್ಯ: ಹಿಜಾಬ್ ನಮ್ಮ ಸಂಸ್ಕೃತಿ, ನಮ್ಮ ಹಕ್ಕು. ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಎಂದು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಹೇಳಿದ್ದಾರೆ.

ಮಂಡ್ಯ ಕಾಲೇಜಿನಲ್ಲಿ ʻಜೈ ಶ್ರೀರಾಮ್ʼ ಘೋಷಣೆಗೆ ಕೂಗುತ್ತಿದ್ದ ಎಬಿವಿಪಿ ಯುವಕರ ಗುಂಪಿಗೆ ವಿರುದ್ಧವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್, ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಬೇಕೆಂಬ ಸಿಎಂ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮ್ಮೀರ್ ಅಹ್ಮದ್ ಖಾನ್, ಯು.ಟಿ ಖಾದರ್, ಡಿ.ಕೆ ಶಿವಕುಮಾರ್ ಎಲ್ಲರಿಗೂ ಧನ್ಯವಾದಗಳು. ನಮ್ಮ ಹಕ್ಕನ್ನು ವಾಪಸ್ ಕೊಟಿರುವುದಕ್ಕೆ ಧನ್ಯವಾದಗಳು. ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಅಣ್ಣ-ತಮ್ಮಂದಿರ ರೀತಿ ಕಾಲೇಜಿಗೆ ಹೋಗಿ ಓದುತ್ತಾ ಇದ್ದೆವು. ಅದೇ ರೀತಿ ಮುಂದೆಯೂ ಹೋಗಬೇಕು ಎಂದು ಮುಸ್ಕಾನ್ ಕೇಳಿಕೊಂಡಿದ್ದಾರೆ.



Join Whatsapp