ಹಿಜಾಬ್ ವಿಚಾರ: ಶಾಲಾ ಕಾಲೇಜುಗಳಿಗೆ ಪ್ರವೇಶ ನಿಷೇಧ ಹೇರುವುದು ಖಂಡನೀಯ: ಕೊಡಗು ಸುನ್ನಿ ವೆಲ್ಫೇರ್ ಅಸೋಶಿಯೇಶನ್ ಜಿಸಿಸಿ

Prasthutha|

ಕೊಡಗು: ಕರ್ನಾಟಕ ರಾಜ್ಯದಾದ್ಯಂತ ಶಾಲಾ ಕಾಲೇಜಿಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ವಿಷಾದನೀಯ, ಕೇವಲ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ವಿಷಯವನ್ನ ಮತೀಯ ಬಣ್ಣ ಬಳಿದು ಇಡೀ ಸಮಾಜವನ್ನು ಅಪರಾಧಿಗಳಂತೆ ಬಿಂಬಿಸುತ್ತಿರುವುದು ಕಂಡುಬರುತ್ತಿದೆ.

- Advertisement -

ಅದರಲ್ಲೂ ಕೆಲವು ಶಿಕ್ಷಕರ ವರ್ತನೆಯೂ ಉತ್ತಮ ಸಮಾಜ ನಿರ್ಮಾಣ ಮಾಡುವ ಬದಲು ಸಮಾಜ ಒಡೆಯುವ ಪ್ರಯತ್ನ ಮಾಡುವ ರೀತಿಯಲ್ಲಿ ಭಾಸವಾಗುತ್ತದೆ. ಇವತ್ತಿನ ಜಗತ್ತಿನಲ್ಲಿ ಬಟ್ಟೆ ಬಿಚ್ಚಿ ಅನೈತಿಕ ಸಂಬಂಧಗಳು ಕಾನೂನಾತ್ಮಕವಾಗಿದ್ದೂ ಪೂರ್ಣ ಪ್ರಮಾಣದ ಬಟ್ಟೆಗಳಿಂದ ಶರೀರ ಮುಚ್ಚುವುದು ಅಪರಾಧವಾಗಿ ಪರಿಗಣಿಸಿರುವುದು ವಿಪರ್ಯಾಸ.

ನ್ಯಾಯಾಲಯದ ಆದೇಶವು ಪೂರಕವಾಗಿ ಬರುವ ನಿರೀಕ್ಷೆ ಇದೆ. ಈಗಾಗಲೇ ಮಧ್ಯಂತರ ಆದೇಶ ಹೊರಡಿಸಿದ ನಂತರವೂ ಹಲವು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧ ಹೇರುವುದನ್ನು  ಕೊಡಗು ಸುನ್ನಿ ವೆಲ್ಫೇರ್ ಸಮಿತಿ ತೀವ್ರವಾಗಿ ಖಂಡಿಸಿದೆ.



Join Whatsapp