ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂಬ ನಿಲುವಿನೊಂದಿಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ತೃಪ್ತಿ ತಂದಿಲ್ಲ . ನ್ಯಾಯಕ್ಕಾಗಿ ಕಾನೂನು ಹೋರಾಟವೇ ಮುಂದಿನ ಹೆಜ್ಜೆ ಎಂದು ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಹೇಳಿದರು.
ಪ್ರಾಯಪ್ರಬುದ್ದರಾದ ಮುಸ್ಲಿಂ ಹೆಣ್ಮಕ್ಕಳಿಗೆ ಹಿಜಾಬ್ ಕಡ್ಡಾಯವಾಗಿದ್ದು, ಹೆಣ್ಮಕ್ಕಳು ಅದನ್ನು ಸ್ವಯಂಪ್ರೇರಣೆಯಿಂದ ಧರಿಸಲು ಬಯಸುತ್ತಿದ್ದಾರೆ. ಹಿಜಾಬ್ ಧರಿಸುವುದರಿಂದ ಇತರ ಯಾರಿಗೂ ಯಾವುದೇ ವಿಧದಲ್ಲಿ ತೊಂದರಯುಂಟಾಗುವುದಿಲ್ಲ ಎಂದು ಅವರು ಹೇಳಿದರು.